CLICK HERE ವಿಕಲಚೇತನ App

ಆಟಿಸಂ ಎಂದರೇನು? ಕಾರಣಗಳು, ಲಕ್ಷಣಗಳು ಮತ್ತು; ಚಿಕಿತ್ಸೆ

ಆಟಿಸಂ ಸ್ಪೆಕ್ಟ್ರಮ್ ಡಿಸ್ಆರ್ಡರ್ (ASD) ಅಥವಾ ಕನ್ನಡದಲ್ಲಿ ಸ್ವಲೀನತೆ ಎಂದು ಕರೆಯಲ್ಪಡುವ ರೋಗ ಸಾಮಾನ್ಯವಾಗಿ ಕಂಡರೂ ಸಂಯುಕ್ತತೆಯಿಂದ ಕೂಡಿರುವ ರೋಗ. ಈ ರೋಗ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಸಮಾಜದಲ್ಲಿ ಹಲವಾರು ಜನರು ಈ ರೋಗದಿಂದ ಬಳಲುತ್ತಿದ್ದರೆ. ಆಟಿಸಂ ರೋಗದ ಲಕ್ಷಣಗಳು, ಅದರ ಚಿಕಿತ್ಸಾ ವಿಧಾನ, ಆ ರೋಗ ಉಂಟಾಗಲು ಕಾರಣ್ ಮತ್ತು ಅದರ ವಿವಿಧತೆಗಳನ್ನೂ ಅರ್ಥೈಸಿಕೊಳ್ಳುವುದರಿಂದ ಆ ರೋಗದಿಂದ ಬಳಲುತ್ತಿರುವವರ ಲೋಕವನ್ನು ಮತ್ತು ಅವರು ಅನುಭವಿಸುತ್ತಿರುವ ತೊಂದರೆಗಳನ್ನು ತಕ್ಕಮಟ್ಟಿಗೆ ಅವರ ದೃಷ್ಟಿಕೋನದಿಂದ ತಿಳಿದುಕೊಳ್ಳಬಹುದು. ಆಟಿಸಂ ರೋಗವನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಿಲ್ಲದಿದ್ದರೂ, ಪ್ರತಿಯೊಬ್ಬ ನಾಗರಿಕ ಈ ರೋಗದಿಂದ ಬಳಲುತ್ತಿರುವವರ ಜೀವನ ಸುಧಾರಿಸಲು ಸಹಾಯ ಮಾಡಬಹುದು. ಈ ಲೇಖನದಲ್ಲಿ ಆಟಿಸಂಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಇದೆ.
ಪರಿವಿಡಿ:
೧. ಆಟಿಸಂ ಎಂದರೇನು?
೨. ಮಕ್ಕಳಲ್ಲಿ ಆಟಿಸಂ
೩. ಆಟಿಸಂ ರೋಗದ ಕಾರಣಗಳು
೪. ಆಟಿಸಂ ರೋಗದ ಬಗೆಗಳು
೫. ಆಟಿಸಂ ರೋಗಲಕ್ಷಣಗಳು
೬. ಆಟಿಸಂ ಚಿಕಿತ್ಸಾ ವಿಧಾನ




೧. ಆಟಿಸಂ ಎಂದರೇನು?


ಆಟಿಸಂ ಸ್ಪೆಕ್ಟ್ರಮ್ ಡಿಸ್ಆರ್ಡರ್ (ASD), ಅಥವಾ ಆಟಿಸಂ ಅತಿರೇಖದ ನರವೈಜ್ಞಾನಿಕ ರೋಗ. ಈ ರೋಗದಿಂದಾಗಿ ನರಮಂಡಲ ದುರ್ಬಲಗೊಂಡಿರುತ್ತದೆ. ಈ ರೋಗದಿಂದ ಬಳಲುತ್ತಿರುವವರು ಸಾಮಾನ್ಯ ಸಾಮಾಜಿಕ ಕೌಶಲ್ಯಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಅಸಾಮರ್ಥ್ಯರಾಗಿರುತ್ತಾರೆ. ಹಾಗಾಗಿ ಈ ಸಮಾಜದಲ್ಲಿ ಅವರು ಹೊಂದಿಕೊಳ್ಳುವುದಕ್ಕೆ ಕಷ್ಟಪಡುತ್ತಾರೆ. ಭಾಷಣದಲ್ಲಿ ದುರ್ಬಲತೆ, ತರ್ಕಹೀನ ವರ್ತನೆ ಮತ್ತು ಸಂವಹನಾ ಕಾರ್ಯದಲ್ಲಿ ಅಸಾಮರ್ಥ್ಯತೆ - ಇವುಗಳು ಇದಾನಿತ್ಯ ಬದುಕಿನಲ್ಲಿ ಆಟಿಸಂನಿಂದ ಬಳಲುತ್ತಿರುವವರು ಎದುರಿಸುವ ಸವಾಲುಗಳು.

ಆಟಿಸಂ ರೋಗದಿಂದ ಬಳಲುತ್ತಿರುವವರನ್ನು ಆಟಿಸ್ಟಿಕ್ ರೋಗಿ ಎಂದು ಕರೆಯುತ್ತಾರೆ. ನಮ್ಮ ಸಮಾಜದಲ್ಲಿ ಅವರು ಹೊಂದಿಕೊಳ್ಳಲು ಹಲವಾರು ದೇಶಗಳಲ್ಲಿ ದೇಶದ ಸಾಮಾಜಿಕ ಸ್ವರೂಪವನ್ನೇ ಬದಲಾಯಿಸಿದ್ದಾರೆ.

೨. ಮಕ್ಕಳಲ್ಲಿ ಆಟಿಸಂ:
ಆಟಿಸಂ ರೋಗಲಕ್ಷಣಗಳು ಸಾಮಾನ್ಯವಾಗಿ ಮಗುವಿನ ಎರಡು ಅಥವಾ ಮೂರೂರ ವಯಸ್ಸಿನಲ್ಲಿ ಕಂಡುಬರಲು ಪ್ರಾರಂಭಿಸುತ್ತವೆ. ಆದರೆ ಕೆಲವು ಪ್ರಕರಣಗಳಲ್ಲಿ, ಆಟಿಸಂ ರೋಗಲಕ್ಷಣಗಳು ಮಗು ೧೮ ತಿಂಗಳಿದ್ದಾಗ ಕಂಡುಬರಬಹುದು. ಆಟಿಸ್ಟಿಕ್ ಮಕ್ಕಳು ಎದುರಿಸುವ ಅತಿ ದೊಡ್ಡ ಸಮಸ್ಯೆ ಸಂವಹನ ಕ್ರಿಯೆಯಲ್ಲಿ ಅಸಾಮರ್ಥ್ಯರಾಗುವುದು. ಹಾಗಾಗಿ ಅವರು ಈ ಸಮಾಜದಲ್ಲಿ ಹೊಂದಿಕೊಳ್ಳಲು ಶ್ರಮಿಸಬೇಕಾಗುತ್ತದೆ. ಆದರೆ, ಇಂತಹ ಮಕ್ಕಳಿಗೆ ಸಹಾಯವಾಗಲು ಹಲವಾರು ಆಟಿಸಂ ಶಾಲೆಗಳನ್ನು ತೆರೆಯಲಾಗಿದೆ. ಅಲ್ಲಿ ಈ ಮಕ್ಕಳಿಗೆ ಅಗತ್ಯವಿರುವ ಕಾಳಜಿ ಹಾಗೂ ಗಮನ ನೀಡಲಾಗುತ್ತದೆ. ಅದರಿಂದ ಈ ಮಕ್ಕಳಲ್ಲಿ ತಾವು ಈ ಸಮಾಜದ ಒಂದು ಭಾಗ ಎನ್ನುವ ಭಾವನೆ ಮೂಡುತ್ತದೆ.





೩. ಆಟಿಸಂ ರೋಗದ ಕಾರಣಗಳು:

ಆಟಿಸಂ ಒಂದು ಜಟಿಲ ಸಮಸ್ಯೆ. ಅದು ಜಟಿಲಗೊಳ್ಳಲು ಹಲವಾರು ಕಾರಣಗಳಿವೆ. ಆ ಕಾರಣಗಳಲ್ಲಿ ಒಂದು - ಈ ರೋಗದ ಹಿಂದಿರುವ ಸಮಸ್ಯೆಗಳನ್ನು ತಿಳಿದುಕೊಳ್ಳದೆ ಇರುವುದು. ಈಗಲೂ ಸಹ ವಿಜ್ಞಾನಿಗಳು ಆಟಿಸಂ ಹಿಂದಿರುವ ಕಾರಣಗಳ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಇರುವ ಜ್ಞಾನದ ಪ್ರಕಾರ, ಆಟಿಸಂಗೆ ಮುಖ್ಯ ಕಾರಣಗಳು ಇಂತಿವೆ:

೧. ವಂಶವಾಹಿಗಳು: ಪಾರಂಪರಿಕವಾಗಿ ಬಂದಿರುವ ವಂಶವಾಹಿಗಳು ಈ ರೋಗಕ್ಕೆ ಕಾರಣವಾಗಿರಬಹುದು.

೨. ಮಗುವಿನ ತಂದೆ ಅಥವಾ ತಾಯಿಗೆ ಗರ್ಭಾವಸ್ಥೆಯ ಸಮಯದಲ್ಲಿ ಅಪರಾವಯಸ್ಸಾಗಿದ್ದರೆ

೩. ಕೆಲವು ಔಷಧಿಗಳು ಈ ರೋಗಗಳನ್ನು ಉಂಟುಮಾಡಬಹುದು

೪. ಬೇರೆ ರೋಗಗಳು

ವಿಜ್ಞಾನಿಗಳ ಪ್ರಕಾರ ರೋಗದ ಕಾರಣಗಳು ಇನ್ನೂ ಅನಿಶ್ಚಿತ.

೪. ಆಟಿಸಂ ರೋಗದ ಬಗೆಗಳು:

ಆಟಿಸಂ ರೋಗವನ್ನು ಆಟಿಸಂ ಸ್ಪೆಕ್ಟ್ರಮ್ ಡಿಸ್ಆರ್ಡರ್ ಎಂದು ಕರೆಯಲು ಕಾರಣ ಇಲ್ಲಿದೆ. ಈ ರೋಗ ಹಲವಾರು ಸಾಮಾಜಿಕ ಅಸ್ವಸ್ಥತೆಗಳನ್ನು ಒಳಗೊಂಡಿದೆ. ಆ ಅಸ್ವಸ್ಥತೆಗಳ ಪಟ್ಟಿ ಕೆಳಗಿದೆ:

೧. ಆಟಿಸ್ಟಿಕ್ ಡಿಸ್ಆರ್ಡರ್: ಮಕ್ಕಳ ಸಂವಹನ ಮತ್ತು ಸಾಮಾಜಿಕ ನಡುವಳಿಕೆಗೆ ಈ ಡಿಸ್ಆರ್ಡರ್ ತೊಂದರೆಯುಂಟು ಮಾಡುತ್ತದೆ. ಸಾಮಾನ್ಯವಾಗಿ ಈ ರೋಗ ೩ ವರ್ಷದ ಕೆಳಗಿನ ಮಕ್ಕಳಲ್ಲಿ ಕಂಡುಬರುತ್ತದೆ.

೨. ಅಸ್ಪೆರ್ಜರ್ ಸಿಂಡ್ರೋಮ್: ಈ ರೋಗದ ಲಕ್ಷಣಗಳು - ಸಾಮಾಜಿಕ ತೊಂದರೆ ಹಾಗೂ ನಿರಾಸಕ್ತಿ ತೋರುವುದು. ಸಂವಹನ ಸಾಮರ್ಥ್ಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ ಮತ್ತು ಸಾಮಾನ್ಯ ಬುದ್ಧಿವಂತಿಕೆ ಅಥವಾ ಹೆಚ್ಚಿನ ಬುದ್ಧಿ ಸಾಮರ್ಥ್ಯವನ್ನು ಹೊಂದಿರುತ್ತಾರೆ.

೩. ಪೆರ್ವಸಿವ್ ದೆವೆಲೋಪ್ಮೆಂಟಲ್ ಡಿಸ್ಆರ್ಡರ್: ಸಾಮಾನ್ಯವಾದ ಆಟಿಸ್ಟಿಕ್ ಲಕ್ಷಣಗಳನ್ನು ಹೊಂದಿರುತ್ತಾರೆ. ಈ ರೋಗಕ್ಕೆ ಎಂದೇ ಯಾವುದೇ ಪ್ರತ್ಯೇಕ ಲಕ್ಷಣಗಳು ಕಂಡುಬರುವುದಿಲ್ಲ.

೫. ಆಟಿಸಂ ರೋಗಲಕ್ಷಣಗಳು:


ಆಟಿಸಂ ರೋಗಲಕ್ಷಣಗಳನ್ನು ಎರಡು ಭಾಗವಾಗಿ ವಿಂಗಡಿಸಬಹುದು: ಸಾಮಾಜಿಕ ತೊಂದರೆಗಳು ಮತ್ತು ಸಂವಹನ ತೊಂದರೆಗಳು. ಈ ತೊಂದರೆಗಳು ಮಗುವಿನ ಯಾವುದೇ ವಯಸ್ಸಿನಲ್ಲಿ ಕಂಡುಬರಬಹುದು. ಆದರೆ, ಸಾಮಾನ್ಯವಾಗಿ ರೋಗಲಕ್ಷಣಗಳು ಒಂದು ಮತ್ತು ಮೂರು ವಯಸ್ಸಿನ ಮಕ್ಕಳಲ್ಲಿ ಪ್ರಧಾನವಾಗಿ ಕಂಡುಬರುತ್ತದೆ. ರೋಗಲಕ್ಷಣಗಳು ಇಂತಿವೆ:

ಸಾಮಾಜಿಕ ತೊಂದರೆಗಳು (೮ ರಿಂದ ೧೦ ತಿಂಗಳ ವಯಸ್ಸಿನ ಮಕ್ಕಳಲ್ಲಿ) :

೧. ಮೊದಲ ವರ್ಷ ತುಂಬುವುದರೊಳಗೆ ತಮ್ಮ ಹೆಸರನ್ನು ಗ್ರಹಿಸಿ, ಅದಕ್ಕೆ ಉತ್ತರಿಸದಿರುವುದು.


೨. ಸಂಭಾಷಿಸುವಾಗ ನಿರಾಸಕ್ತಿ ತೋರುವುದು.

೩. ದೈಹಿಕ ಸಂಪರ್ಕವನ್ನು ತಿರಸ್ಕರಿಸುವುದು.

೪. ಯಾತನೆಯಲ್ಲಿರುವಾಗ ಹುರಿದುಂಬಿಸುವ ಪರಿಕಲ್ಪನೆಯನ್ನು ಪ್ರಶಂಸಿಸಲು ಮತ್ತು ಅರ್ಥೈಸಿಕೊಳ್ಳಲು ವಿಫಲರಾಗುವುದು.

೫. ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಅಸಮರ್ಥತೆ ತೋರುವುದು.

ಸಂವಹನ ತೊಂದರೆಗಳು:


೧. ಮಾತಾನಾಡುವಾಗ ಧ್ವನಿಯಲ್ಲಿ ಏರಿಳಿತದ ಕೊರತೆ.

೨. ತಡವಾದ ಭಾಷಣ ಮತ್ತು ಪರಿಭಾಷೆಯ ಕೌಶಲ್ಯಗಳು.

೩. ಒಂದೇ ಪದ ಅಥವಾ ವಾಕ್ಯವನ್ನು ಪದೇ ಪದೇ ಪುನರುಚ್ಛರಿಸುವುದು.

೪. ಆಡುಗಪದ ಅಥವಾ ಸರ್ವನಾಮಗಳ ಬಳಕೆಯನ್ನು ಅರ್ಥೈಸಿಕೊಳ್ಳುವಲ್ಲಿ ಅಸಾಮರ್ಥ್ಯತೆ.

೫. ಜಗತ್ತಿನ ಸಾರ್ವತ್ರಿಕ ಸನ್ನೆಗಳಿಗೆ ಪ್ರತಿಕ್ರಿಯೆ ನೀಡದಿರುವುದು (ಅದಕ್ಕೆ ಕಾರಣ ಅವುಗಳನ್ನು ಅರ್ಥ ಮಾಡಿಕೊಳ್ಳುವುದು ಅವರಿಗೆ ಕಷ್ಟಸಾಧ್ಯ).

೬.ಯಾವುದೇ ಚರ್ಚೆಯ ಸಮಯದಲ್ಲಿ ಅದರಿಂದ ರುದವಿರಲು ಬಯಸುವುದು.

೭. ವಿವಿಧ ರೀತಿಯ ಸಂವಹನಗಳನ್ನು ಅರ್ಥೈಸಿಕೊಳ್ಳುವಲ್ಲಿ ತೊಂದರೆ. (ಉದಾಹರಣೆಗೆ: ನಗು, ಅಳು,ಚುಚ್ಚುಮಾತು, ಮುಂತಾದವು)

ಕೆಲವು ಬಾರಿ, ಮಕ್ಕಳಲ್ಲಿ ಸ್ವಲೀನತೆ ಅಥವಾ ಆಟಿಸಂ ಲಕ್ಷಣಗಳು ನಡವಳಿಕೆಯ ಮಾದರಿಯಲ್ಲಿ ವ್ಯತ್ಯಾಸಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಅಂತಹ ಸ್ವಲೀನತೆ ಲಕ್ಷಣಗಳು ಇಲ್ಲಿವೇ:

೧. ದೇಹದ ಭಾಗಗಳು ಅವಿಶ್ರಾಂತವಾಗಿ, ಪುನರಾವರ್ತಿತ ಚಲನೆಗಳನ್ನು ತೋರುವುದು.

೨. ವಿವರಿಸಲಾಗದಂತಹ ಕಾಡುಚುಟಿತನ ತೋರುವುದು.

೩. ಆಚರಣೆಗಳು ಮತ್ತು ಪದ್ಧತಿಗಳ ಅತಿಯಾದ ಅವಲಂಬನೆ.

೪. ವಸ್ತುಗಳ ಮೇಲೆ ಯಾದೃಚ್ಛಿಕ ಸ್ಥಿರೀಕರಣ.

೫. ಚಡಪಡಿಕೆಯ ಮತ್ತು ಅಕ್ರಮಣಾಕಾರಿ ವರ್ತನೆ.

೬. ದೈಹಿಕ ಸಂಪರ್ಕವನ್ನು ಇಷ್ಟ ಪಡದಿರುವುದು.





೬. ಆಟಿಸಂ ಚಿಕಿತ್ಸಾ ವಿಧಾನ:
ಆಟಿಸಂನ ವಿವಿಧ ಬಗೆಗಳಿಂದ ಆಟಿಸಂ ರೋಗಲಕ್ಷಣಗಳನ್ನು ತಿಳಿದುಕೊಂಡಾಗಿದೆ. ಈಗ ಅದರ ಚಿಕಿತ್ಸಾ ವಿಧಾನಗಳನ್ನು ತಿಳಿದುಕೊಳ್ಳೋಣ. ಆಟಿಸಂನ ಚಿಕಿತ್ಸೆ ಕೇವಲ ಥೆರಪಿಯಾಗಿದೆ. ಥೆರಪಿ ಎಂದರೆ ಪ್ರೀತಿಯಿಂದ ಕಾಳಜಿ ವಹಿಸಿ ನೋಡಿಕೊಳ್ಳುವುದು. ಆಟಿಸಂ ಥೆರಪಿಯನ್ನು ಎರಡು ಬಗೆಯಾಗಿ ವಿಂಗಡಿಸಬಹುದು: ೧. ಅರ್ಲಿ ಇಂಟರ್ವೆನ್ಶನ್ ಥೆರಪಿ ಅಥವಾ ಆರಂಭಿಕ ಹಸ್ತಕ್ಷೇಪ ಚಿಕಿತ್ಸೆ ಮತ್ತು ೨. ಶಾಲಾಪೂರ್ವದ ಮಕ್ಕಳು ಮತ್ತು ಇನ್ನುಳಿದ ಮಕ್ಕಳಿಗಾಗಿ ಇರುವ ಥೆರಪಿ

೧. ಅರ್ಲಿ ಇಂಟರ್ವೆನ್ಷನ್ ಥೆರಪಿ: ಮಕ್ಕಳಲ್ಲಿ ಆಟಿಸಂ ರೋಗ ನಿರ್ಣಯ ಮಾಡಿದ ಕೂಡಲೇ ಮಕ್ಕಳಿಗೆ ಚಿಕಿತ್ಸೆ ನೀಡುವುದು ಸೂಕ್ತ. ಅರ್ಲಿ ಇಂಟರ್ವೆನ್ಷನ್ ಥೆರಪಿಯನ್ನು ಕೂಸಿಗೆ ಅಥವಾ ಶಾಲಾಪೂರ್ವದ ಮಕ್ಕಳಿಗೆ ಉಪಯೋಗಿಸಲಾಗುತ್ತದೆ. ಈ ಚಿಕಿತ್ಸೆಗೆ ಎರಡು ಮಾದರಿ ಇದೆ: ಲೊವಾಸ್ ಮಾದರಿ, ಅರ್ಲಿ ಸ್ಟಾರ್ಟ್ ಡೆನ್ವರ್ ಮಾದರಿ.

೨. ಶಾಲಾಪೂರ್ವದ ಮಕ್ಕಳು ಮತ್ತು ಇನ್ನುಳಿದ ಮಕ್ಕಳಿಗಾಗಿ ಇರುವ ಥೆರಪಿ: ಆಟಿಸಂ ಚಿಕಿತ್ಸೆ ಬೇಗೆ ಶುರು ಮಾಡಿದಷ್ಟು ನಿಮ್ಮ ಮಗುವಿಗೆ ಒಳಿತು. ಚಿಕಿತ್ಸೆಯ ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದಾದರೂ, ಅದರ ಪ್ರಯೋಜನಗಳು ಸಾಬೀತಾಗಿದೆ. ಈ ಕೆಳಗಿರುವ ಚಟುವಟಿಕೆಗಳು ಆಟಿಸಂ ರೋಗದ ಚಿಕಿತ್ಸೆಯ ಭಾಗವಾಗಿದೆ.

೨.೧. ಒಂದು ವಾರದಲ್ಲಿ ಕನಿಷ್ಠ ಪಕ್ಷ ೨೫ ಘಂಟೆಗಳ ಚಿಕಿತ್ಸೆ ಪಡೆಯಬೇಕು.

೨.೨. ವೃತ್ತಿಪರ ಅಥವಾ ಅನುಭವಿ ಚಿಕಿತ್ಸಕರ ನೆವಕಾತಿ ಮಾಡಿಕೊಳ್ಳುವುದು ಒಳಿತು.

೨.೩. ಚಿಕಿತ್ಸಾ ಮಾಡ್ಯುಲ್ ಗಳು ನಿಯಮಿತವಾಗಿ ಪರಿಶೀಲಿಸಿದ ತರಬೇತಿ ಉದ್ದೇಶಗಳೊಂದಿಗೆ ಸ್ಥಾಪಿಸಲ್ಪಟ್ಟಿರುತ್ತದೆ. ಈ ಉದ್ದೇಶಗಳಿಗೆ ಹೋಲಿಸಿ ಮಗುವಿನ ಅಭಿವೃದ್ಧಿಯನ್ನು ಅಳೆಯಲಾಗುತ್ತದೆ.

೨.೪. ಆಟಿಸ್ಟಿಕ್ ಮಕ್ಕಳಿಗೆ ಬೇರೆ ಆಟಿಸ್ಟಿಕ್ ಮಕ್ಕಳೊಂದಿಗೆ ಸಂವಹಿಸಲು ಅವಕಾಶ ನೀಡಬೇಕು.

೨.೫. ನಿರ್ದಿಷ್ಟ ಕೊರತೆಯನ್ನು ಮದ್ದು ನೀಡಲು ನಿರ್ದಿಷ್ಟ ಚಿಕಿತ್ಸೆ.

೨.೬. ಆಟಿಸಂ ಚಿಕಿತ್ಸೆಯ ಸಂಪೂರ್ಣ ಪ್ರಕ್ರಿಯೆಯಲ್ಲಿ ಪೋಷಕರು ಸಂಪೂರ್ಣವಾಗಿ ಭಾಗವಹಿಸುವಂತೆ ಮಾಡುವುದು.

೨.೭. ವಿವಿಧ ವೈದ್ಯರಿಂದ ವಿವಿಧ ಚಿಕಿತ್ಸೆ ಪಡೆಯುವುದು - ವಾಕ್ ಚಿಕಿತ್ಸೆ, ಮನೋವೈದ್ಯಕೀಯ ಚಿಕಿತ್ಸೆ, ಇತ್ಯಾದಿ.



More Information 
ಆಟಿಸಮ್ ಸ್ಪೆಕ್ಟ್ರಮ್ ಅಸ್ವಸ್ಥತೆಯು ಮೆದುಳಿನ ಬೆಳವಣಿಗೆಗೆ ಸಂಬಂಧಿಸಿದ ಒಂದು ಷರತ್ತು, ಇದು ವ್ಯಕ್ತಿಯು ಹೇಗೆ ಗ್ರಹಿಸುತ್ತದೆ ಮತ್ತು ಇತರರೊಂದಿಗೆ ಸಾಮಾಜಿಕವಾಗಿ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಪರಿಣಾಮ ಬೀರುತ್ತದೆ. ಆಟಿಸಮ್ ಮತ್ತು ಅದರ ಸಂಬಂಧಿತ ಅಸ್ವಸ್ಥತೆಗಳನ್ನು ಈಗ ಆಟಿಸಮ್ ಸ್ಪೆಕ್ಟ್ರಮ್ ಡಿಸಾರ್ಡರ್ಸ್ (ಎಎಸ್ಡಿ) ಎಂದು ಕರೆಯಲಾಗುತ್ತದೆ. ಎಎಸ್ಡಿ ತಮ್ಮ ಜಾತಿ, ಜನಾಂಗ, ಸಂಸ್ಕೃತಿ ಅಥವಾ ಆರ್ಥಿಕ ಹಿನ್ನೆಲೆಯ ಹೊರತಾಗಿಯೂ ವಿಶ್ವದ ಅನೇಕ ವ್ಯಕ್ತಿಗಳಲ್ಲಿ ಕಂಡುಬರುತ್ತದೆ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಸ್ವಲೀನತೆ ಬಾಲಕಿಯರಿಗಿಂತ ಹುಡುಗರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. 2014 ರಲ್ಲಿ 59 ಮಕ್ಕಳಲ್ಲಿ ಸುಮಾರು 1 ಮಕ್ಕಳನ್ನು ಸ್ವಲೀನತೆಯೊಂದಿಗೆ ಗುರುತಿಸಲಾಗಿದೆ. ಆಟಿಸಂ ಎಂದರೇನು? ಆಟಿಸಮ್ ಸ್ಪೆಕ್ಟ್ರಮ್ ಡಿಸಾರ್ಡರ್ ಸಾಮಾಜಿಕ ಸಂದರ್ಭಗಳಲ್ಲಿ ಸಂವಹನ, ಸಂವಹನ ಮತ್ತು ಸರಿಯಾಗಿ ವರ್ತಿಸುವ ವ್ಯಕ್ತಿಯ ಸಾಮರ್ಥ್ಯದ ಮೇಲೆ ಪ್ರಭಾವ ಬೀರುವ ಒಂದು ನರ ಅಭಿವೃದ್ಧಿಯ ಸ್ಥಿತಿಯಾಗಿದೆ. ಬಾಲ್ಯದಲ್ಲಿ ಇದು ಪ್ರಾರಂಭವಾಗುತ್ತದೆ ಮತ್ತು ಸಮಾಜದಲ್ಲಿ ಸಾಮಾಜಿಕವಾಗಿ ಕಾರ್ಯ ನಿರ್ವಹಿಸುವಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಸಾಮಾಜಿಕ ಸಂವಹನ ಮತ್ತು ಅಭಿವೃದ್ಧಿ ಭಾಷೆ ಮತ್ತು ಸಂವಹನ ಕೌಶಲ್ಯಗಳಲ್ಲಿ ಕಠಿಣವಾದ, ಪುನರಾವರ್ತಿತ ನಡವಳಿಕೆಗಳನ್ನು ಒಳಗೊಂಡಿರುತ್ತದೆ. ಇದು ರೋಗಲಕ್ಷಣಗಳು ಮತ್ತು ದೌರ್ಬಲ್ಯಗಳ ಒಂದು ದೊಡ್ಡ ರೋಹಿತವನ್ನು ಒಳಗೊಳ್ಳುತ್ತದೆ. ಸ್ವಲೀನತೆಯೊಂದಿಗೆ ಇರುವ ಮಕ್ಕಳು ಇತರ ಜನರು ಏನು ಯೋಚಿಸುತ್ತಾರೆ ಮತ್ತು ಅನುಭವಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ. ಅವರು ಸಂವಹನದಲ್ಲಿ ತೊಂದರೆ ಎದುರಿಸುತ್ತಾರೆ. ಇದು ಪದಗಳನ್ನು ಅಥವಾ ಸನ್ನೆಗಳೊಂದಿಗೆ ತಮ್ಮನ್ನು ತಾವು ವ್ಯಕ್ತಪಡಿಸಲು ತುಂಬಾ ಕಷ್ಟಕರವಾಗುತ್ತದೆ. ಆಟಿಸಂ? ಆಟಿಸಂ ಲಕ್ಷಣಗಳು ಯಾವುವು? ಕೆಲವೊಂದು ಮಕ್ಕಳು ಆರಂಭಿಕ ಬಾಲ್ಯದಲ್ಲಿ ಸ್ವಲೀನತೆ ಸ್ಪೆಕ್ಟ್ರಮ್ ಅಸ್ವಸ್ಥತೆಯ ಲಕ್ಷಣಗಳನ್ನು ತೋರಿಸುತ್ತಾರೆ, ಆದರೆ ಇತರರು ಬೆಳೆದಂತೆ ಅವರು ತೋರಿಸುತ್ತಾರೆ. ಸ್ವಲೀನತೆಯ ಕೆಲವು ಸಾಮಾನ್ಯ ಲಕ್ಷಣಗಳು: ಅಸಾಮಾನ್ಯ ಮಾತಿನ ಮಾದರಿಯ ಅಳವಡಿಕೆ ಇತರರೊಂದಿಗೆ ಕಣ್ಣಿನ ಸಂಪರ್ಕವನ್ನು ತಪ್ಪಿಸುವುದು ತಮ್ಮ ಹೆಸರಿಗೆ ಪ್ರತಿಕ್ರಿಯಿಸಿಲ್ಲ ಭಾಷಣ ಕೌಶಲಗಳ ತಡವಾದ ಬೆಳವಣಿಗೆ ಸಂಭಾಷಣೆ ನಡೆಸುವಲ್ಲಿ ಕಷ್ಟವಿದೆ ಪದೇ ಪದೇ ಪದಗುಚ್ಛಗಳನ್ನು ಪುನರಾವರ್ತಿಸುವುದು ಭಾವನೆಗಳನ್ನು ಮತ್ತು ತಮ್ಮ ಅಭಿವ್ಯಕ್ತಿಗಳನ್ನು ಅರ್ಥಮಾಡಿಕೊಳ್ಳುವಲ್ಲಿ ತೊಂದರೆ ಆಟಿಸಂ? ಸ್ವಲೀನತೆ ಸ್ಪೆಕ್ಟ್ರಮ್ ಡಿಸಾರ್ಡರ್ನ ಪ್ರತಿ ಮಗುವಿಗೆ ವರ್ತನೆ ಮತ್ತು ತೀವ್ರತೆಯ ವಿಶಿಷ್ಟ ಮತ್ತು ವಿಭಿನ್ನ ಮಾದರಿಗಳಿವೆ. ಕೆಲವರು ಕಲಿಕೆಯ ಕಷ್ಟವನ್ನು ಹೊಂದಿದ್ದರೆ, ಕೆಲವರು ಸಾಮಾನ್ಯ ಬುದ್ಧಿಮತ್ತೆಯನ್ನು ಕಡಿಮೆ ಮಾಡುತ್ತಾರೆ. ಪ್ರತಿ ಮಗುವಿಗೆ ರೋಗಲಕ್ಷಣಗಳ ಒಂದು ವಿಶಿಷ್ಟವಾದ ಮಿಶ್ರಣವಿದೆ, ಆದ್ದರಿಂದ ತೀವ್ರತೆಯನ್ನು ಕೆಲವೊಮ್ಮೆ ನಿರ್ಧರಿಸಲು ಕಷ್ಟವಾಗಬಹುದು. ಸ್ವಲೀನತೆಯೊಂದಿಗಿನ ಯಾವುದೇ ಇಬ್ಬರೂ ಒಂದೇ ಅಲ್ಲ, ಆದರೆ ಅನೇಕ ಪೋಷಕರು ತಮ್ಮ ಮಗುವಿಗೆ ನಿರ್ದಿಷ್ಟ ಬೆಳವಣಿಗೆಯ ಮೈಲಿಗಲ್ಲುಗಳನ್ನು ಹೊಂದಿರದಿದ್ದಾಗ ಅಸ್ವಸ್ಥತೆಯ ಲಕ್ಷಣಗಳನ್ನು ಗಮನಿಸುತ್ತಾರೆ, ಸಾಮಾನ್ಯವಾಗಿ 18 ತಿಂಗಳಿನಿಂದ 3 ವರ್ಷ ವಯಸ್ಸಿನವರು. ಸ್ವಲೀನತೆಯು ಮಾನಸಿಕ ಅಸ್ವಸ್ಥತೆ ಅಥವಾ ಕಾಲಾನಂತರದಲ್ಲಿ ಕೆಟ್ಟ ಸ್ಥಿತಿಯನ್ನು ಉಂಟುಮಾಡುವ ಸ್ಥಿತಿ ಎಂದು ತಿಳಿಯುವುದು ಮುಖ್ಯ. ಪ್ರತಿಯೊಬ್ಬರೂ ಅದರಿಂದ ಹೊರಹೊಮ್ಮುತ್ತಾರೆ ಮತ್ತು ಚಿಕಿತ್ಸೆಯೊಂದಿಗೆ ಸಮಯವನ್ನು ಬೆಳೆಸುತ್ತಾರೆ. ಆಟಿಸಂ? ಸ್ವಲೀನತೆಗೆ ಕಾರಣವೇನು? ಆಟಿಸಮ್ ಸ್ಪೆಕ್ಟ್ರಮ್ ಡಿಸಾರ್ಡರ್ಗೆ ಯಾವುದೇ ಕಾರಣವಿಲ್ಲ. ಆದಾಗ್ಯೂ, ತಳಿಶಾಸ್ತ್ರ ಮತ್ತು ಪರಿಸರವು ಒಂದು ಪಾತ್ರವನ್ನು ವಹಿಸಬಹುದು. ಸ್ವಲೀನತೆಯ ಕೆಲವು ಶಂಕಿತ ಕಾರಣಗಳನ್ನು ಕೆಳಗೆ ನೀಡಲಾಗಿದೆ: ಸ್ವಲೀನತೆಯೊಂದಿಗೆ ತಕ್ಷಣದ ಕುಟುಂಬದ ಸದಸ್ಯರನ್ನು ಹೊಂದಿರುವವರು ಕಡಿಮೆ ಜನನ ತೂಕ ಜೆನೆಟಿಕ್ ರೂಪಾಂತರಗಳು ಎ ಹಿಸ್ಟರಿ ಆಫ್ ವೈರಲ್ ಸೋಂಕುಗಳು ಭಾರಿ ಲೋಹಗಳು ಮತ್ತು ಪರಿಸರ ವಿಷಗಳಿಗೆ ತೆರೆದುಕೊಳ್ಳುವಿಕೆ ಚಯಾಪಚಯ ಅಸಮತೋಲನಗಳು ಹಳೆಯ ಪೋಷಕರಿಗೆ ಹುಟ್ಟಿದ ಆಟಿಸಂ ಆಟಿಸಮ್ ಹೇಗೆ ಚಿಕಿತ್ಸೆ ನೀಡಲಾಗುತ್ತದೆ? ಸ್ವಲೀನತೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ ಆದರೆ ವ್ಯಕ್ತಿಯು ಉತ್ತಮವಾಗಿರಲು ಸಹಾಯ ಮಾಡುವ ಹಲವಾರು ಚಿಕಿತ್ಸೆಗಳು ಇವೆ. ಆಟಿಸಮ್ ಚಿಕಿತ್ಸೆಗಳು ವಿರಳವಾಗಿ ವೈದ್ಯಕೀಯ. ಸ್ವಲೀನತೆಗೆ ನಿರ್ದಿಷ್ಟವಾಗಿ ಅಭಿವೃದ್ಧಿಪಡಿಸಿದ ವರ್ತನೆಯ ಚಿಕಿತ್ಸೆಯು ಅತ್ಯಂತ ಹಳೆಯದಾದ ಮತ್ತು ಅತ್ಯಂತ ಸಂಪೂರ್ಣವಾದ ಸಂಶೋಧನೆಯಾಗಿದೆ. ಸ್ವಲೀನತೆಯ ಹಲವು ಚಿಕಿತ್ಸಾ ವಿಧಾನಗಳು: ವರ್ತನೆಯ ಚಿಕಿತ್ಸೆ ದೈಹಿಕ ಚಿಕಿತ್ಸೆ ಸ್ಪೀಚ್ ಥೆರಪಿ ಚಿಕಿತ್ಸೆಯನ್ನು ಪ್ಲೇ ಮಾಡಿ ಔದ್ಯೋಗಿಕ ಚಿಕಿತ್ಸೆ