CLICK HERE ವಿಕಲಚೇತನ App

ಅಂಗವಿಕಲರ ಮಾಸಾಶನ ಯೋಜನೆ

ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಅವರಿಗೆ ಆರ್ಥಿಕ ಭದ್ರತೆಯನ್ನೊದಗಿಸಲು ಕೆಳಕಂಡ ಅಂಗವಿಕಲತೆಯುಳ್ಳ, ಅಂಗವಿಕಲತೆಯೊಂದಿಗೆ ಹುಟ್ಟಿದ ಮಗು ಮತ್ತು ಅಪಘಾತದಿಂದ ಅಂಗವಿಕಲತೆ ಉಂಟಾದ ವ್ಯಕ್ತಿಗಳು ಈ ಮಾಸಾಶನಕ್ಕೆ ಅರ್ಹರಾಗಿರುತ್ತಾರೆ.
ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶಗಳಲ್ಲಿ ರೂ.12,000/- ಹಾಗೂ ನಗರ ಪ್ರದೇಶಗಳಲ್ಲಿ ರೂ.17,000/- ಕ್ಕಿಂತ ಕಡಿಮೆ ಇರಬೇಕು
ಅಂಗವಿಕಲ ವ್ಯಕ್ತಿಗಳ (ಸಮಾನ ಹ್ಕಕುಗಳ ಸಂರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ), ಅಧಿನಿಯಮ 1995 ಅಧ್ಯಾಯ 1 ಭಾಗ 2(4)(ಟಿ) ರಲ್ಲಿ ಅಂಗವಿಕಲ ವ್ಯಕ್ತಿ ಎಂದರೆ ವೈದ್ಯಕೀಯ ಪ್ರಾಧಿಕಾರವು ಪ್ರಮಾಣೀಕರಿಸಿದ ರೀತಿಯಲ್ಲಿ ಯಾವುದೇ ಅಂಗವಿಕಲತೆಯಿಂದ ಶೇಕಡಾ 40ಕ್ಕಿಂತ ಕಡಿಮೆ ಇರದಂತೆ ಅದರಿಂದ ಬಳಲುತ್ತಿರುವ ವ್ಯಕ್ತಿ.

ಅಂಗವಿಕಲರೆ ಎಂದರೆ:-

ಅಂಧತ್ವ
ಮಂದದೃಷ್ಟಿ
ಕುಷ್ಠರೋಗ ನಿವಾರಿತರಾದ
ಶ್ರವಣದೋಷವುಳ್ಳವರು
ಚಲನವಲನ ಅಂಗವಿಕಲತೆ
ಬುದ್ಧಿಮಾಂದ್ಯತೆ
ಮಾನಸಿಕ ಅಸ್ವಸ್ಥತೆ



ಶೇಕಡಾ 40 ರಷ್ಟು ಹಾಗೂ ಅದಕ್ಕಿಂತ ಹೆಚ್ಚು ಅಂಗವೈಕಲ್ಯತೆಯುಳ್ಳ ವ್ಯಕ್ತಿಗಳು ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿದ್ದರೆ 500.00 ರೂ ಮಾಸಾಶನ ಪಡೆಯಲು ಅರ್ಹರಾಗಿರುತ್ತಾರೆ.
ಶೇಕಡಾ 75 ರಷ್ಟು ಹಾಗೂ ಅದಕ್ಕಿಂತ ಹೆಚ್ಚು ಅಂಗವೈಕಲ್ಯತೆಯುಳ್ಳ ವ್ಯಕ್ತಿಗಳು ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿದ್ದರೆ 1200.00 ರೂ ಮಾಸಾಶನ ಪಡೆಯಲು ಅರ್ಹರಾಗಿರುತ್ತಾರೆ.


ಈ ಯೋಜನೆಗೆ ಸಲ್ಲಿಸಬೇಕಾದ ದಾಖಲಾತಿಯ ವಿವರ ಕೆಳಕಂಡಂತಿದೆ.

ಆದಾಯ ಪ್ರಮಾಣ ಪತ್ರ.
ವೈದ್ಯಕೀಯ ಪ್ರಮಾಣ ಪತ್ರ
ವಾಸಸ್ಥಳದ ದೃಢೀಕರಣ ಪತ್ರ
ವಯಸ್ಸಿನ ದೃಢೀಕರಣ ಪತ್ರ