ನಮ್ಮ ದೇಹದ ಅಸಂಖ್ಯಾತ ಜೀವಕೋಶಗಳಿಗೆ ರಕ್ತಪರಿಚಲನೆಯ ಮೂಲಕ ಆಮ್ಲಜನಕ ಪೂರೈಕೆಯಾಗುತ್ತದೆ.
ಆದರೆ ಈ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಯವಾದಾಗ ಅಥವಾ ಅದು ನಿಂತುಹೋದಾಗ, ಲಕ್ವಾ ಉಂಟಾಗುತ್ತದೆ. ಲಕ್ವಾ ಅಘಾತವಾದಾಗ ಕಂಡು ಬರುವ ಐದು ಬಹುಮುಖ್ಯ ಲಕ್ಷಣಗಳು ಅಂದರೆ:
1. ಮುಖಭಾಗ, ಕೈ-ಕಾಲು ಅದರಲ್ಲೂ ದೇಹದ ಒಂದು ಪಾರ್ಶ್ವವು ಮರಗಟ್ಟುವುದು ಅಥವಾ ಜಡವಾಗುವುದು. ದೇಹದ ಆ ಭಾಗವನ್ನು ಅತ್ತಿತ್ತ ಚಲಾಯಿಸಲು ಆಗದಿರುವುದು, ಸಂವೇದನೆಗಳು ಭಾಗಶಃ ಅಥವಾ ಸಂಪೂರ್ಣವಾಗಿ ನಷ್ಟವಾಗುವುದು.ಲಕ್ವಾದ ಪ್ರಭಾವಕ್ಕೆ ಒಳಗಾದ ಭಾಗದಲ್ಲಿ ಜುಮುಗುಡುವುದು ಅಥವಾ ಇರುವೆ ಹರಿದಾಡಿದಂತೆ ಭಾಸವಾಗುವುದು.
2. ಮಾತನಾಡಲು ಅಥವಾ ಮಾತನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುವುದು ಅಥವಾ ಗೊಂದಲವಾಗುವುದು - ಅಂದರೆ ಅಸ್ಪಷ್ಟತೆ. ಕೆಲವು ಸಲ ಮುಖದ ಸ್ನಾಯುಗಳ ದೌರ್ಬಲ್ಯದಿಂದಾಗಿ ಮಾತು ತೊದಲಬಹುದು.
3. ಒಂದು ಅಥವಾ ಎರಡೂ ಕಣ್ಣುಗಳಲ್ಲಿ ನೋಡಲು ಕಷ್ಟವಾಗುವುದು, ಅಂದರೆ ದೃಷ್ಟಿ ಮಂದವಾಗುವುದು.
4.ನಡಿಗೆ ಕಷ್ಟವಾಗುವುದು, ತಲೆಸುತ್ತು ವುದು, ದೇಹದ ಸಮತೋಲನ ಅಥವಾ ಚಟು ವಟಿಕೆಗಳಲ್ಲಿ ಹೊಂದಾಣಿಕೆ ಕಷ್ಟವಾಗುವುದು.
5. ಅಕಾರಣವಾದ ತೀವ್ರ ತಲೆನೋವು.
ಲಕ್ವಾ ಎಂದರೇನು?
ಅ) ರಕ್ತನಾಳದಲ್ಲಿ ಅಡಚಣೆ
ಮೆದುಳಿನ ಸಣ್ಣ ರಕ್ತನಾಳಗಳು ಸಪೂರವಾಗುವುದರಿಂದ ಲ್ಯಾಕ್ಯುನಾರ್ ಲಕ್ವಾ ಉಂಟಾಗುತ್ತದೆ (ಲ್ಯಾಕ್ಯು ಎಂದರೆ ಖಾಲಿ ಜಾಗ ಎಂದರ್ಥ ). ಇಲ್ಲಿ ಒಂದೇ ರಕ್ತನಾಳದಲ್ಲಿ ಅಡಚಣೆ ಉಂಟಾಗುವುದರಿಂದ ಮೆದುಳಿನ ಒಂದು ಸಣ್ಣ ಭಾಗದ ಅಂಗಾಂಶಗಳು ನಾಶವಾಗುತ್ತವೆ.
ಮೆದುಳಿಗೆ ರಕ್ತ ಸರಬರಾಜು ಮಾಡುವ ರಕ್ತನಾಳಗಳು ಪೆಡಸಾಗುವುದು (ಅಥೆರೋಸ್ಕಿ$É ರೋಸಿಸ್). ಮೆದುಳಿಗೆ ನಾಲ್ಕು ಮುಖ್ಯ ರಕ್ತನಾಳಗಳು ರಕ್ತ ಸರಬರಾಜು ಮಾಡುತ್ತವೆ. ಕೈ-ಕಾಲುಗಳ ಚಲನೆ, ಸಂವೇದನೆ, ಯೋಚನೆ, ಮಾತು ಹಾಗೂ ಭಾವನೆ... ಇತ್ಯಾದಿಗಳನ್ನು ಮೆದುಳಿನ ಮೇಲ್ಭಾಗಕ್ಕೆ ಆಗುವ ರಕ್ತ ಪರಿಚಲನೆಯು ನಿಯಂತ್ರಿಸುತ್ತದೆ. ಕ್ಯಾರೋಟಿಡ್ ರಕ್ತನಾಳ ಇಲ್ಲಿಗೆ ರಕ್ತ ಸರಬರಾಜು ಮಾಡುತ್ತದೆ. ಮೆದುಳಿನ ಕೆಳಭಾಗಕ್ಕೆ ವರ್ಟೆಬ್ರೋಬ್ಯಾಸಿಲಾರ್ ರಕ್ತನಾಳಗಳು ರಕ್ತವನ್ನು ಪೂರೈಸುತ್ತವೆ. ಮೆದುಳಿನ ಕಾಂಡ ಹಾಗೂ ಸೆರೆಬೆಲ್ಲಮ್ ಭಾಗಗಳಿಗೆ ವರ್ಟೆಬ್ರೋಬ್ಯಾಸಿಲಾರ್ ರಕ್ತನಾಳಗಳು ರಕ್ತವನ್ನು ಪೂರೈಸುತ್ತವೆ. ಇವು ಮೆದುಳಿನ ಸ್ವಯಂಚಾಲಿತ ಚಟುವಟಿಕೆಗಳನ್ನು ನಿಯಂತ್ರಿಸುತ್ತವೆ.
ಅಥೆರೊಸ್ಕಿ$Éರೋಸಿಸ್ ಕಾರಣದಿಂದ ರಕ್ತನಾಳಗಳು ಸಪೂರವಾಗುವುದರಿಂದ, ಕಿಟ್ಟ ಅಥವಾ ಕೊಲೆಸ್ಟ್ರಾಲ್ ಮತ್ತಿತರ ಕಶ್ಮಲಗಳ ಕಾರಣದಿಂದ ರಕ್ತಪರಿಚಲನೆಗೆ ಅಡ್ಡಿಯಾಗಿ ಲಕ್ವಾ ಉಂಟಾಗುತ್ತದೆ. ಲ್ಯಾಕ್ಯುನಾರ್ ಲಕ್ವಾಕ್ಕೆ ವ್ಯತಿರಿಕ್ತವಾಗಿ, ಮೆದುಳಿನ ದೊಡ್ಡ ಭಾಗಗಳಿಗೆ ರಕ್ತಪರಿಚಲನೆ ನಿಂತು ಹೋಗುವುದರಿಂದಲೂ, ಲ್ಯಾಕ್ಯುನಾರ್ ಲಕ್ವಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ರಕ್ತನಾಳಗಳು ಸಪೂರವಾಗುವುದರಿಂದ ಮೆದುಳಿನಲ್ಲಾಗುವ ಅದೇ ಅಪಾಯ ಹೃದಯದ ರಕ್ತನಾಳಗಳು ಸಪೂರವಾಗುವುದರಿಂದಲೂ ಆಗುತ್ತದೆ. ಅದರ ಪರಿಣಾಮವೇ ಹೃದಯಾಘಾತ (ಮಯೋಕಾರ್ಡಿಯಲ್ ಇನ್ಫಾರR$Òನ್). ಇನ್ನಿತರ ಅಪಾಯಕಾರಿ ಅಂಶಗಳು ಅಂದರೆ -
ಅತಿ ರಕ್ತದೊತ್ತಡ.
ಅತಿಯಾದ ಕೊಲೆಸ್ಟ್ರಾಲ್.
ಡಯಾಬೆಟಿಸ್.
ಧೂಮಪಾನ.
ಬಿ) ರಕ್ತನಾಳದ ಹೆಮರೇಜ್ :
ಸೆರೆಬ್ರಲ್ ಹೆಮರೇಜ್ (ಮೆದುಳಿನ ಒಳಭಾಗದಲ್ಲಿಯೇ ರಕ್ತಸ್ರಾವವಾಗುವುದು). ಅನಿಯಂತ್ರಿತ ರಕ್ತದೊತ್ತಡದ ಕಾರಣದಿಂದಾಗಿ ಈ ರೀತಿ ಆಗುವ ಸಾಧ್ಯತೆ ಹೆಚ್ಚು .
ಅನ್ಯೂರಿಸಂ -ರಕ್ತನಾಳದಲ್ಲಿ ಸಂರಚನೆಯ ಅಸಹಜತೆ ಇದ್ದಾಗ , ಅಂದರೆ ಅಸಹಜವಾಗಿ ಬೆಳೆದ ರಕ್ತನಾಳಗಳಲ್ಲಾಗುವ ರಕ್ತಸ್ರಾವ. ಮೆದುಳಿನಲ್ಲಿ ರಕ್ತನಾಳಗಳು ಒಡೆದು ಸುತ್ತಲಿನ ಅಂಗಾಂಶಗಳಿಗೆ ಸ್ರಾವವಾಗುವುದನ್ನು ಸೆರೆಬ್ರೆಲ್ ಹೆಮರೇಜ್ ಎಂದು ಹೇಳುತ್ತಾರೆ. ಸೆರೆಬ್ರೆಲ್ ಹೆಮರೇಜ್ ಆದಾಗಲೂ ಮೆದುಳಿನ ಭಾಗಗಳಿಗೆ, ವಿವಿಧ ಕಾರಣಗಳಿಂದ ಆಮ್ಲಜನಕ ಹಾಗೂ ರಕ್ತ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದರಿಂದ, ಇಲ್ಲಿಯೂ ಲಕ್ವಾದ ಲಕ್ಷಣಗಳೇ ಕಂಡು ಬರುತ್ತವೆ.
ಸಬ್‌ಅರಕರಾಯಿಡ್ ಹೆಮರೇಜ್: ಇದರಲ್ಲಿ ಅಸಹಜ ರಕ್ತನಾಳವು ಒಡೆದು, ಸ್ರಾವವಾದ ರಕ್ತವು ಮೆದುಳಿನ ನಡುಪೊರೆಯಲ್ಲಿ ಸಂಗ್ರಹವಾಗುತ್ತದೆ. ಹೆಚ್ಚಾಗಿ ಅನ್ಯೂರಿಸಂ (ರಕ್ತನಾಳದ ಗೋಡೆಯು ಬಲೂನಿನಂತೆ ಹಿಗ್ಗುವುದು) ಕಾರಣದಿಂದಾಗಿ ಹೀಗಾಗುತ್ತದೆ. ಸಬ್ ಅರಕನಾಯಿಡ್ ಹೆಮರೇಜ್ ಉಂಟಾದ ಕೂಡಲೇ ಹಠತ್ತಾಗಿ ತೀವ್ರ ತಲೆನೋವು, ತಲೆಸುತ್ತು, ವಾಂತಿ, ಬೆಳಕನ್ನು ನೋಡಲು ಆಗದಿರುವಿಕೆ, ಕತ್ತು ಪೆಡಸಾಗುವುದು... ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಸಕಾಲದಲ್ಲಿ ಗುರುತಿಸಿ ಚಿಕಿತ್ಸೆ ನೀಡದೇ ಹೋದರೆ, ಸಮಸ್ಯೆ ಗಂಭೀರವಾಗಬಹುದು. ಅಂದರೆ, ವ್ಯಕ್ತಿಯು ಕೋಮಾಕ್ಕೆ ಹೋಗಬಹುದು, ಮೆದುಳು ಸತ್ತುಹೋಗುವ ಸಾಧ್ಯತೆಯೂ ಇದೆ.
ವ್ಯಾಸ್ಕಾéಲೈಟಿಸ್ : ಇದು ಲಕ್ವಾಕ್ಕೆ ಕಾರಣವಾಗುವ ಅತ್ಯಂತ ಅಪರೂಪದ ಸಾಧ್ಯತೆ. ವ್ಯಾಸ್ಕಾéಲೈಟಿಸ್‌ನಲ್ಲಿ ರಕ್ತನಾಳಗಳು ಉರಿಯೂತಕ್ಕೆ ಒಳಗಾಗಿ, ಮೆದುಳಿಗೆ ರಕ್ತಪರಿಚಲನೆ ಕಡಿಮೆಯಾಗುವುದರಿಂದ ಲಕ್ವಾ ಉಂಟಾಗುತ್ತದೆ.
ಮೈ ಗÅೇನ್ ತಲೆನೋವು : ಮೈಗ್ರೇನ್ ತಲೆನೋವು ಇರುವವರಲ್ಲಿ ಲಕ್ವಾದ ಲಕ್ಷಣಗಳು ಬಹಳ ನಿಧಾನವಾಗಿ ಕಂಡುಬರುತ್ತವೆೆ. ಮೈಗ್ರೇನ್ ಅಥವಾ ವ್ಯಾಸ್ಕಾéಲಾರ್ ತಲೆನೋವಿಗೆ ಮೆದುಳಿನ ರಕ್ತನಾಳಗಳು ಸಪೂರವಾಗುವ ಹಿನ್ನಲೆ ಇರುತ್ತದೆ.
ಟ್ರಾನಿಯೆಂಟ್ಸ್ ಐಷೆಮಿಕ್
ಆಘಾತ ಎಂದರೇನು?
ಟ್ರಾನ್ಸಿಯೆಂಟ್ ಐಷೆಮಿಕ್ ಆಘಾತ ಅಂದರೆ ಅಲ್ಪಕಾಲಿಕ ಅಥವಾ ಸಣ್ಣ ಅವಧಿಯ ಲಕ್ವಾ. ಸಣ್ಣ ಅವಧಿ ಅಂದರೆ 24 ಗಂಟೆಗಿಂತಲೂ ಸಣ್ಣ ಅವಧಿ ಆ ಬಳಿಕ ಇದರ ಲಕ್ಷಣಗಳು ಮರೆಯಾಗಿ, ರೋಗಿಯು ಮತ್ತೆ ಮೊದಲಿನಂತಾಗುತ್ತಾನೆ. ಈ ಲಕ್ವಾದಲ್ಲಿ ತಾತ್ಕಾಲಿಕವಾಗಿ ರಕ್ತ ಪೂರೈಕೆ ನಿಂತು ಹೋಗುವುದರಿಂದ, ಮೆದುಳು ಸ್ವಲ್ಪ ಸಮಯ ನಿಷ್ಕ್ರಿಯವಾಗುತ್ತದೆ. ಇದರಲ್ಲಿ ಲಕ್ವಾದ ಪ್ರಭಾವಕ್ಕೊಳಗಾದ ಮೆದುಳಿನ ಭಾಗದಿಂದ ನಿಯಂತ್ರಿತವಾಗುವ ದೇಹದ ಪಾರ್ಶ್ವವು ನಿಷ್ಕ್ರಿಯವಾಗುತ್ತದೆ. ಮೆದುಳಿನಲ್ಲಿಯೇ ನಿರಂತರವಾಗಿ ರಕ್ತವು ಹೆಪ್ಪುಗಟ್ಟುವ (ಥ್ರೊಂಬೋಸಿಸ್) ಕಾರಣದಿಂದಾಗಿ ರಕ್ತ ಪರಿಚಲನೆಯಲ್ಲಿ ವ್ಯತ್ಯಯ ಉಂಟಾಗಬಹುದು. ಹೃದಯದಲ್ಲಾದ ರಕ್ತದ ಹೆಪ್ಪುಗಡ್ಡೆಯು ಮೆದುಳಿಗೆ ಪ್ರವಹಿಸಿ, ಮೆದುಳಿನ ರಕ್ತನಾಳದಲ್ಲಿ ಅಡಚಣೆ ಉಂಟು ಮಾಡುವ ಕಾರಣದಿಂದಲೂ ಲಕ್ವಾ ಸಂಭವಿಸಬಹುದು. ರಕ್ತ ಸ್ರಾವವಾಗುವ ಕಾರಣದಿಂದಲೂ ಅಪರೂಪಕ್ಕೆ ಟ್ರಾನ್ಸಿಯೆಂಟ್ ಐಷೆಮಿಕ್ ಆಘಾತ ಉಂಟಾಗಬಹುದು. ಕೆಲವರು ಇದನ್ನು ಮಿನಿ ಲಕ್ವಾ ಎಂದು ಕರೆಯುತ್ತಾರೆ. ಟ್ರಾನ್ಸಿಯೆಂಟ್ ಐಷೆಮಿಕ್ ಆಘಾತಕ್ಕೆ ಹೋಲಿಸಿದರೆ , ಸಾಮಾನ್ಯ ಲಕ್ವಾದ ಪರಿಣಾಮದಿಂದ ಹೊರಬರಲು ಬಹಳ ಸಮಯ ಬೇಕಾಗಬಹುದು, ಅಥವಾ ಅದು ಶಾಶ್ವತ ತೊಂದರೆಗಳನ್ನು ಉಂಟು ಮಾಡಬಹುದು. ಹೆಚ್ಚಿನ ಟ್ರಾನ್ಸಿಯೆಂಟ್ ಐಷೆಮಿಕ್ ಆಘಾತಗಳು ಕೆಲವೇ ನಿಮಿಷದವುಗಳಾಗಿದ್ದರೂ ಸಹ, ಇವು ಮತ್ತೆ ಮರುಕಳಿಸದಂತೆ ತಡೆಯಲು, ಇವುಗಳಿಗೂ ಸಹ ಲಕ್ವದಷ್ಟೆ ತುರ್ತಾಗಿ ಸ್ಪಂದಿಸಬೇಕಾದದ್ದು ಆವಶ್ಯಕ. ಈ ಲಕ್ವಾವು ಒಂದೆರಡು ಬಾರಿ ಕಂಡುಬರಬಹುದು ಅಥವಾ ಶಾಶ್ವತ ಲಕ್ವಾದ ಮುನ್ಸೂಚನೆಯಾಗಿ ಕಾಣಿಸಿಕೊಳ್ಳಬಹುದು. ಟ್ರಾನ್ಸಿಯೆಂಟ್ ಐಷೆಮಿಕ್ ಆಘಾತವನ್ನು ತುರ್ತಾಗಿ ಸ್ಪಂದಿಸಬೇಕು. ಯಾಕೆಂದರೆ, ಈ ಪರಿಸ್ಥಿತಿಯನ್ನು ಸುಧಾರಿಸಿ ದೇಹದ ಚಟುವಟಿಕೆಗಳನ್ನು ಮತ್ತೆ ಸರಿಪಡಿಸಬಹುದು ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ.
ಕ್ಯಾರೋಟಿಡ್ ರಕ್ತನಾಳದಲ್ಲಿ ಟ್ರಾನ್ಸಿಯೆಂಟ್ ಐಷೆಮಿಕ್ ಆಘಾತ ಉಂಟಾದರೆ, ದೇಹದ ಒಂದು ಪಾರ್ಶ್ವದಲ್ಲಿ ಚಲನೆ ಹಾಗೂ ಸಂವೇದನೆಯ ತೊಂದರೆಗಳು ಉಂಟಾಗುತ್ತವೆ. ವಾಸ್ತವವಾಗಿ ಅಡಚಣೆ ಇರುವ ಭಾಗದ ವಿರುದ್ಧ ದಿಕ್ಕಿನಲ್ಲಿ ಹೀಗಾಗುತ್ತದೆ. ಟ್ರಾನ್ಸಿಯೆಂಟ್ ಐಷಮಿಕ್ ಆಘಾತಕ್ಕೆ ಒಳಗಾದ ವ್ಯಕ್ತಿಗೆ, ತಾತ್ಕಾಲಿಕವಾಗಿ ದೃಶ್ಯಗಳು ಎರಡೆರಡಾಗಿ ಕಾಣಿಸುವುದು, ವರ್ಟಿಗೋ, ದೇಹದ ಸಮತೋಲನ ತಪ್ಪುವುದು, ಒಂದು ಬದಿಯಲ್ಲಿ ನಿಶ್ಶಕ್ತಿ, ಕೈ , ಕಾಲು, ಮುಖ ಅಥವಾ ಸಂಪೂರ್ಣ ದೇಹವು ಪಕ್ಷವಾತಕ್ಕೆ ಒಳಗಾಗುವುದು ಅಥವಾ ಮಾತನಾಡಲು ಕಷ್ಟವಾಗುವುದು ಅಥವಾ ಸನ್ನೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುವುದು... ಇತ್ಯಾದಿ ಲಕ್ಷಣಗಳು ಕಂಡುಬರಬಹುದು.
ಲಕ್ವಾದ ಪರಿಣಾಮಗಳೇನು?
ಲಕ್ವವು ಮನುಷ್ಯರ ಮರಣಕ್ಕೆ ಕಾರಣವಾಗಿರುವ ಮೂರನೆಯ ದೊಡ್ಡ ಕಾಯಿಲೆಯೆನಿಸಿದೆ( ಹೃದಯದ ಕಾಯಿಲೆಗಳು ಹಾಗೂ ಎಲ್ಲಾ ವಿಧದ ಕ್ಯಾನ್ಸರ್‌ಗಳ ನಂತರ). ರೋಗದ ಕಾರಣದಿಂದಾಗಿ ಚಿಕಿತ್ಸೆಗಾದ ಹಣಕಾಸಿನ ನಷ್ಟವನ್ನಷ್ಟೇ ಇಲ್ಲಿ ಲೆಕ್ಕ ಹಾಕಲಾಗದು . ಈ ಕಾಯಿಲೆಯಿಂದ ಅತಿಮುಖ್ಯವಾಗಿ, ರೋಗಿಯು ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡು ಪರಾವಲಂಬಿಯಾಗುತ್ತಾರೆ. ಸುಮಾರು 30 % ಸಂದರ್ಭಗಳಲ್ಲಿ ಹೀಗಾಗುತ್ತದೆ. ಅಂದರೆ ಲಕ್ವಾದ ಆಘಾತದ ಬಳಿಕ ಹೆಚ್ಚಿನವರು ತಮ್ಮ ಹಿಂದಿನ ಅತ್ಯಮೂಲ್ಯ ಜೀವನಾನಂದವನ್ನು ಕಳೆದುಕೊಳ್ಳುತ್ತಾರೆ. ಈ ಕಾರಣದಿಂದಾಗಿ, ರೋಗಿಯ ಗೆಳೆಯರು ಹಾಗೂ ಮನೆಯವರೂ ಸಹ ತಮ್ಮ ಜೀವನ ವಿಧಾನವನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಅಂದರೆ, ಅವರು ರೋಗಿಯ ಆರೈಕೆದಾರರು ಎಂಬ ಹೊಸ ಪಾತ್ರವನ್ನು ಒಪ್ಪಿಕೊಳ್ಳಬೇಕಾಗುತ್ತದೆ.
ಲಕ್ವಾದ ಲಕ್ಷಣಗಳೇನು ?
ಮೆದುಳಿನ ಜೀವಕೋಶಗಳಿಗೆ ಆಮ್ಲಜನಕದ ಕೊರತೆ ಉಂಟಾದಾಗ, ಅವು ತಮ್ಮ ಕಾರ್ಯವನ್ನು ನಿರ್ವಹಿಸುವಲ್ಲಿ ವಿಫಲವಾಗುತ್ತವೆ. ಮೆದುಳಿನ ಯಾವ ಭಾಗದ ಮೇಲೆ ಪರಿಣಾಮ ಉಂಟಾಗಿದೆ ಹಾಗೂ ಯಾವ ಪ್ರಮಾಣದಲ್ಲಿ ಆಘಾತವಾಗಿದೆ ಎಂಬುದರ ಆಧಾರದ ಮೇಲೆ , ವೈಕಲ್ಯವು ಉಂಟಾಗುತ್ತದೆ.
ಲಕ್ವಾದ ಆಘಾತವಾದಾಗ ಕಂಡುಬರುವ ಐದು ಪ್ರಮುಖ ಲಕ್ಷಣಗಳೆಂದರೆ -
ಹಠಾತ್ ಆಗಿ ಮುಖ, ತೋಳು ಅಥವಾ ಕಾಲುಗಳಲ್ಲಿ ಮರಗಟ್ಟಿದಂತೆ ಆಗುವುದು ಅಥವಾ ನಿಶ್ಶಕ್ತಿ ಅನ್ನಿಸುವುದು, ವಿಶೇಷವಾಗಿ ದೇಹದ ಒಂದು ಪಾರ್ಶ್ವದಲ್ಲಿ ಈ ರೀತಿ ಆಗುವುದು.
ಹಠಾತ್ ಆಗಿ ಮಾತನಾಡಲು, ಮಾತುಗಳನ್ನು ಅರ್ಥಮಾಡಿಕೊಳ್ಳಲು ಗೊಂದಲವಾಗುವುದು. ಕೆಲವೊಮ್ಮೆ ಮುಖದ ಸ್ನಾಯುಗಳಿಗೂ ಲಕ್ವಾ ಪ್ರಭಾವ ಬೀರುವುದರಿಂದ, ಮಾತು ತೊದಲಬಹುದು.
ಹಠಾತ್ ಆಗಿ ಒಂದು ಅಥವಾ ಎರಡೂ ಕಣ್ಣುಗಳಲ್ಲಿ ನೋಡಲು ಕಷ್ಟವಾಗುವುದು.
ಹಠಾತ್ ಆಗಿ ದೇಹದ ಸಮತೋಲನ ತಪ್ಪುವುದು, ನಡೆದಾಡಲು ಕಷ್ಟವಾಗುವುದು, ತಲೆಸುತ್ತುವುದು .
ಅಕಾರಣವಾಗಿ ತೀವ್ರ ತಲೆನೋವು ಬಾಧಿಸುವುದು.
ಯಾರಿಗಾದರೂ ಲಕ್ವಾ ಆಘಾತ
ಆಗಿದೆ ಎಂದು ನಿಮಗೆ ಅನಿಸಿದರೆ
ನೀವು ಏನು ಮಾಡಬಹುದು?
ಮೇಲೆ ಹೇಳಿದಂತಹ ಲಕ್ಷಣಗಳು ಯಾರಲ್ಲಿಯಾದರೂ ಹಠಾತ್ ಆಗಿ ಕಂಡು ಬಂದರೆ, ಕೂಡಲೇ ತುರ್ತಾಗಿ ವೈದ್ಯಕೀಯ ನೆರವನ್ನು ಪಡೆಯಬೇಕು. 4 ರಿಂದ 5 ಗಂಟೆಗಳ ಒಳಗಾಗಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸಿ, ಸೂಕ್ತ ಚಿಕಿತ್ಸೆಯನ್ನು ಒದಗಿಸಿದರೆ, ಆಗಬಹುದಾದ ವೈಕಲ್ಯದ ಪ್ರಮಾಣವನ್ನು ತಗ್ಗಿಸಬಹುದು. ತುರ್ತಾಗಿ ಸಿ.ಟಿ.ಸ್ಕ್ಯಾನ್ ಮಾಡಿಸಿಕೊಳ್ಳುವುದರಿಂದ, ಲಕ್ವಾವು ರಕ್ತವು ಹೆಪ್ಪುಗಟ್ಟಿದ ಕಾರಣದಿಂದ ಉಂಟಾಗಿದೆಯೋ ಅಥವಾ ಮೆದುಳಿನ ಆಘಾತದಿಂದ ಉಂಟಾಗಿದೆಯೋ ಎಂದು ಗೊತ್ತಾಗುತ್ತದೆ. ಯಾವ ಕಾರಣದಿಂದಾಗಿ ಉಂಟಾಗಿದೆ ಎಂದು ತಿಳಿದರೆ, ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಆದಷ್ಟು ಬೇಗನೇ, ಆರಂಭಿಸಬಹುದು. ಈ ಸಂದರ್ಭದಲ್ಲಿ ಅತ್ಯಂತ ತುರ್ತಾಗಿ ವೈದ್ಯಕೀಯ ನಿರ್ಧಾರದ ಆವಶ್ಯಕತೆ ಇರುತ್ತದೆ. ಅಂದರೆ, ಹೆಪ್ಪುಗಟ್ಟುವಿಕೆಯ ನಿವಾರಣೆಗೆ ಔಷಧಗಳಲ್ಲಿ ಯಾವುದು ಪ್ರಸ್ತುತ ಮತ್ತು ಯಾವುದು ಸೂಕ್ತ ಎಂಬುದರ ತುರ್ತು ನಿರ್ಧಾರವು ರೋಗಿಯ ವೈಕಲ್ಯದ ಪ್ರಮಾಣವನ್ನು ಬಹಳಷ್ಟು ತಗ್ಗಿಸುತ್ತದೆ. ಲಕ್ವಾದ ಆಘಾತದ ಪ್ರಮಾಣವನ್ನು ತಗ್ಗಿಸಲು ಅತ್ಯಲ್ಪ ಸಮಯಾವಕಾಶ ಹಾಗೂ ಸಾಧ್ಯತೆಗಳಿರುವ ಕಾರಣ, ಈ ಸಂದರ್ಭದ ಚಿಕಿತ್ಸೆಯು ಬಹಳ ಪ್ರಮುಖವೆನಿಸುತ್ತದೆ. ನಿಧಾನ ಮಾಡಿದರೆ ಆ ಅವಕಾಶವೂ ತಪ್ಪಿಹೋಗುತ್ತವೆ.
ಆದಷ್ಟು ಬೇಗನೇ ಆಂಬುಲೆನ್ಸ್ ರೋಗಿಯನ್ನು ತಲುಪುವಂತೆ ನೋಡಿಕೊಳ್ಳಬೇಕು. ಇದು ಚಿಕಿತ್ಸೆಯ ಮೊದಲ ಆದ್ಯತೆ. ಪ್ಯಾರಾ ಮೆಡಿಕ್ಸ್ ಅಥವಾ ಅರೆ-ವೈದ್ಯಕೀಯ ಸದಸ್ಯರು ಆಸ್ಪತ್ರೆಯಲ್ಲಿ ರೋಗಿಯ ಸ್ಥಿತಿಯನ್ನು ವಿವರಿಸಿ, ಅಲ್ಲಿ ತುರ್ತಾಗಿ ಸೂಕ್ತ ಚಿಕಿತ್ಸೆ ದೊರಕುವಂತೆ ನೋಡಿಕೊಳ್ಳಬಹುದು.
ಆಂಬುಲೆನ್ಸ್‌ಗೆ ಕಾಯುವಂತಹ ಸಂದರ್ಭದಲ್ಲಿ , ಕೆಳಗೆ ಹೇಳಿದಂತಹ ಪ್ರಥಮ ಚಿಕಿತ್ಸಾಗಳನ್ನು ಕೈಗೊಳ್ಳಬಹುದು:
ಆಘಾತವಾದ ವ್ಯಕ್ತಿಯನ್ನು ಅಂಗಾತ ಮಲಗಿಸಿ, ಆಗ ಮೆದುಳಿಗೆ ರಕ್ತಸರಬರಾಜಾಗಲು ಸುಲಭವಾಗುತ್ತದೆ.
ರೋಗಿಗೆ ಮಂಪರು, ಪ್ರತಿಕ್ರಿಯೆ ರಹಿತನಾಗಿರುವುದು ಅಥವಾ ವಾಕರಿಕೆ... ಇತ್ಯಾದಿ ಲಕ್ಷಣಗಳಿದ್ದರೆ, ವಾಂತಿ ಮಾಡಿಕೊಂಡು ರೋಗಿಗೆ ಅಪಾಯವಾಗದಂತೆ, ರೋಗಿಯನ್ನು ಸುರಕ್ಷಿತ ಭಂಗಿಯಲ್ಲಿ ಇರಿಸಬೇಕು.
ಲಕ್ವಾವನ್ನು ತಡೆಗಟ್ಟುವಲ್ಲಿ ಆಸ್ಪಿರಿನ್ ಮಹತ್ವದ ಪಾತ್ರವನ್ನು ವಹಿಸುತ್ತದೆ. ಆದರೆ ಒಮ್ಮೆ ಲಕ್ವಾದ ಲಕ್ಷಣಗಳು ಕಂಡುಬಂದವು ಎಂದಾದರೆ, ರೋಗಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸದ ವಿನಾ ಆಸ್ಪಿರಿನ್‌ನ್ನು ಕೊಡಬಾರದು. ಲಕ್ವಾದ ಆಘಾತದಲ್ಲಿ ರಕ್ತಸ್ರಾವವೂ ಇದ್ದರೆ, ಆಗ ಆಸ್ಪಿರಿನ್ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಬಹುದು. ವ್ಯಕ್ತಿಗೆ ಈ ಸಂದರ್ಭದಲ್ಲಿ ನುಂಗುವಿಕೆಯ ತೊಂದರೆಗಳೂ ಉಂಟಾಗುವ ಕಾರಣ, ಇದು ಅಪಾಯಕಾರಿಯಾಗಬಹುದು.
ಮೂರು ವಿಚಾರಗಳನ್ನು ಸಿನ್ ಸಿನ್ಯಾಟಿಕ್ ಪ್ರಿ-ಹಾಸ್ಟಿಟಲ್ ಸ್ಟ್ರೋಕ್ ಸ್ಕೇಲ್ ಎಂಬುದಾಗಿ ಪರಿಗಣಿಸಲಾಗುತ್ತದೆ. ಇವುಗಳ ಆಧಾರದಲ್ಲಿ ವ್ಯಕ್ತಿಗೆ ಯಾವ ಪ್ರಮಾಣದಲ್ಲಿ ಲಕ್ವಾದ ಆಘಾತ ಅಗಿದೆ ಎಂಬುದನ್ನು ಅಂದಾಜು ಮಾಡಬಹುದು.
ಆಘಾತವಾದ ವ್ಯಕ್ತಿಯನ್ನು ಹೀಗೆ ಮಾಡಲು ಹೇಳಿ .
1. ನಗು: ಮುಖವು ಏಕಪ್ರಕಾರವಾಗಿ ಚಲಿಸಬೇಕು.
2. ಎರಡೂ ಕೈಗಳನ್ನು ಮೇಲಕ್ಕೆ ಎತ್ತಲಿ: ದೇಹದ ಒಂದು ಬದಿಯಲ್ಲಿ ನಿಶ್ಶಕ್ತಿ ಇದೆಯೇ ಎಂದು ಗಮನಿಸಿ.
3. ಸಣ್ಣಸಣ್ಣ ವಾಕ್ಯಗಳನ್ನು ಮಾತನಾಡಲಿ.
ತೀವ್ರ ಪ್ರಮಾಣದಲ್ಲಿ ಆಘಾತವಾದ ವ್ಯಕ್ತಿ ಈ ಚಟುವಟಿಕೆಗಳನ್ನು ಮಾಡಲಾರ. ಇದನ್ನು ಲಕ್ವಾದ ಆಘಾತ ಎಂದು ಪರಿಗಣಿಸಿ, ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿ.
ಲಕ್ವಾ ಆಘಾತದ ತಪಾಸಣೆ
ಹೇಗೆ ?
ವೈದ್ಯರು ಸಾಧ್ಯವಿದ್ದರೆ, ರೋಗಿಯಿಂದಲೇ ಆತನ ಆರೋಗ್ಯದ ಹಿನ್ನಲೆಯನ್ನು ತಿಳಿದುಕೊಳ್ಳುತ್ತಾರೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ, ಆತನ ಹತ್ತಿರದವರಿಂದ ಅದನ್ನು ತಿಳಿದುಕೊಳ್ಳುತ್ತಾರೆ. ವೈದ್ಯರು ಕೇಳಬಹುದಾದ ಪ್ರಮುಖ ಪ್ರಶ್ನೆಗಳು ಅಂದರೆ, ಲಕ್ಷಣಗಳು ಏನೇನು, ಯಾವಾಗ ಕಂಡುಬಂತು, ಅವು ಕಡಿಮೆ ಆದವೇ, ಹೆಚ್ಚಾದವೇ ಅಥವಾ ಹಾಗೆಯೇ ಇವೆಯೇ ... ಇತ್ಯಾದಿ. ರೋಗಿಯ ಈ ಹಿಂದಿನ ವೈದ್ಯಕೀಯ ಅಥವಾ ಆರೋಗ್ಯ ಸಂಬಂಧಿ ಹಿನ್ನೆಲೆಗಳು ಲಕ್ವಾಕ್ಕೆ ಸಂಬಂಧಿಸಿದ ಅಪಾಯಕಾರಿ ಅಂಶಗಳನ್ನು ಪತ್ತೆ ಮಾಡಲು ಹಾಗೂ ರಕ್ತಸ್ರಾವಕ್ಕೆ ಸಂಬಂಧಿಸಿದ šಔಷಧಗಳನ್ನು (ಉದಾಹರಣೆಗೆ ಆಸ್ಪಿರಿನ್, ಕ್ವಾಪಿಡಾಗ್ರೆಲ್, ವಾರಾ–ರಿನ್... ಇತ್ಯಾದಿ) ಪತ್ತೆ ಮಾಡಲು ಸಹಕಾರಿ.
ರೋಗಿಯ ದೈಹಿಕ ಪರೀಕ್ಷೆಯ ಮೂಲಕ, ಯಾವ ಭಾಗದ ಚಟುವಟಿಕೆ ನಿಂತು ಹೋಗಿದೆ ಎಂದು ತಿಳಿದುಬರುತ್ತದೆ, ಆ ಮೂಲಕ ಆ ಭಾಗದ ಮೆದುಳಿಗೆ ರಕ್ತ ಸರಬರಾಜು ನಿಂತು ಹೋಗಿದೆ ಎಂದು ಅಂದಾಜು ಮಾಡುತ್ತಾರೆ. ನರವ್ಯೂಹದ ಅಸಹಜತೆಯಲ್ಲಿ ಹಾಗೂ ಮೆದುಳಿನ ಕಾಯಿಲೆಗಳ ವಿಶೇಷಜ್ಞರಾಗಿರುವ ನರತಜ್ಞರು , ಲಕ್ವಾದ ರೋಗಿಯ ತಪಾಸಣಿ ಹಾಗೂ ನಿರ್ವಹಣೆಗಳಲ್ಲಿ ಸಹಕರಿಸುತಾರೆ.
ಲಕ್ವಾ ಆಘಾತದ ರೀತಿಯಲ್ಲಿಯೇ ಇರುವಂತಹ ಇನ್ನಿತರ ಪರಿಸ್ಥಿತಿಗಳು ಅಂದರೆ:
ಮೆದುಳಿನ ಗಡ್ಡೆಗಳು.
ಮೆದುಳಿನ ಕುರು (ಬ್ಯಾಕ್ಟೀರಿಯ ಅಥವಾ ಫಂಗಸ್‌ಗಳಿಂದಾಗಿ ಕೀವು ತುಂಬಿಕೊಳ್ಳುವುದು).
ಮೈಗ್ರೇನ್ ತಲೆನೋವು.
ಮೆದುಳಿನಲ್ಲಿ ನಿರಂತರವಾಗಿ ಅಥವಾ ಹೊಡೆತದಿಂದಾಗಿ ರಕ್ತ ಸ್ರಾವವಾಗುವುದು.
ಮೆನಿಂಜೈಟಿಸ್ ಆಥವಾ ಎನ್‌ಸೆಫಾಲೈಟಿಸ್.
ಕೆಲವು ಔಷಧಿಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದು.
ದೇಹದಲ್ಲಿ ಎಲೆಕ್ಟ್ರೊಲೈಟ್‌ಗಳ ಅಸಮತೋಲನ, ಕ್ಯಾಲ್ಸಿಯಂ, ಸೋಡಿಯಂ, ಗ್ಲೂಕೋಸ್...
ಇತ್ಯಾದಿಗಳ ಸಾಂದ್ರತೆಯಲ್ಲಾಗುವ ಅಸಹಜತೆಯು ನರವ್ಯೂಹದ ಮೇಲೆ ಪ್ರಭಾವ ಬೀರಿ, ಅದರ ಪರಿಣಾಮದ ಲಕ್ಷಣಗಳೂ ಸಹ ಲಕ್ವಾದ ರೀತಿಯಲ್ಲಿಯೇ ಇರುತ್ತವೆ.
ತೀವ್ರ ಲಕ್ವಾ ಆಘಾತವಾದಾಗ, ಔಷಧೋಪಚಾರದಿಂದ ವೈಕಲ್ಯದ ಪ್ರಮಾಣವನ್ನು ತಗ್ಗಿಸಲು, ಮತ್ತೆ ರಕ್ತಸರಬರಾಜನ್ನು ಸರಾಗಗೊಳಿಸಲು ಸಮಯಾವಕಾಶ ಬಹಳ ಕಡಿಮೆ ಇರುತ್ತದೆ. ಹಾಗಾಗಿ,ಯಾವುದೇ ರೀತಿಯ ಹೆಪ್ಪು ನಿವಾರಕ ಔಷಧಿಯನ್ನು ಉಪಯೋಗಿಸುವ ಮೊದಲು ರೋಗಿಯನ್ನು ತಕ್ಕ ಪ್ರಮಾಣದಲ್ಲಿ ತಪಾಸಣೆ ಮಾಡುವುದು ಆವಶ್ಯಕ.
ಕಂಪ್ಯೂಟರೈಸ್ಡ್ ಟೊಮೋಗ್ರಫಿ:
ಲಕ್ವಾವು ಮೆದುಳಿಗಾದ ರಕ್ತ ಸರಬರಾಜಿನ ವ್ಯತ್ಯಯದಿಂದ ಆಗಿದೆಯೇ ಅಥವಾ ರಕ್ತ ಸ್ರಾವದಿಂದ ಆಗಿದೆಯೇ ಅಥವಾ ಮೆದುಳಿನಲ್ಲಿ ಯಾವುದೇ ರೀತಿಯ ದ್ರವ ಸಂಗ್ರಹದಿಂದ ಆಗಿದೆಯೇ ಎಂದು ಪತ್ತೆ ಮಾಡಲು ಸಿ.ಟಿ. ಸ್ಕ್ಯಾನ್ ಮಾಡುತ್ತಾರೆ
MRI ಸ್ಕ್ಯಾನ್ : ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್. ಇದರಲ್ಲಿ ಎಕ್ಸ್-ರೇಗಿಂತಲೂ ಬಲವಾದ ಕಾಂತೀಯ ತರಂಗಗಳ ಮೂಲಕ ಮೆದುಳಿನ ಬಿಂಬವನ್ನು ಪಡೆಯುತ್ತಾರೆ. ಇದರಲ್ಲಿ ಸಿ.ಟಿ.ಸ್ಕ್ಯಾನ್ ಗಿಂತಲೂ ಹೆಚ್ಚು ವಿವರವಾಗಿ ಮೆದುಳಿನ ಬಿಂಬವನ್ನು ಪಡೆಯಬಹುದು. ಆದರೆ, ಸಮಯಾವಕಾಶದ ಅಭಾವ ಹಾಗೂ ಕೆಲವು ಆಸ್ಪತ್ರೆಗಳಲ್ಲಿ ಈ ಯಂತ್ರದ ಲಭ್ಯತೆ ಇರದ ಕಾರಣ, ಕೆಲವೆಡೆ ಲಕ್ವಾ ಚಿಕಿತ್ಸೆಯಲ್ಲಿ ಪ್ರಥಮ ಆದ್ಯತೆಯಲ್ಲಿ ಇದರ ಬಳಕೆ ಮಾಡವುದಿಲ್ಲ.
MRI ತಂತ್ರಜ್ಞಾನದ ಇನ್ನಿತರ ವಿಧಾನಗಳು : ದೇಹವನ್ನು ಪ್ರವೇಶಿಸದೆಯೇ (ನಳಿಕೆಗಳು ಆಥವಾ ಇಂಜೆಕ್ಷನ್ ಮೂಲಕ) ರಕ್ತನಾಳದ ಪರಿಸ್ಥಿತಿಯನ್ನು ಪತ್ತೆ ಮಾಡಲು MRI ಯನ್ನು ಉಪಯೋಗಿಸುತ್ತಾರೆ . ಈ ವಿಧಾನಕ್ಕೆ MRI ಎಂದು ಹೆಸರು (ಮ್ಯಾಗ್ನೇಟಿಕ್ ರಿಸೊನೆನ್ಸ್ ಆಂಜಿಯೋಗ್ರಾಂ). ಡಿಫ್ಯೂಷನ್ ವೈಟೆಡ್ ಇಮೇಜಿಂಗ್ ( ಈಗಐ ) ಎಂಬುದು ಮತ್ತೂಂದು ವಿಧಾನ. ಇದನ್ನು ಅನೇಕ ಕಡೆಗಳಲ್ಲಿ ಉಪಯೋಗಿಸುತ್ತಾರೆ. ಈ ವಿಧಾನದಲ್ಲಿ ಆಸಹಜತೆಗೆ ಒಳಗಾದ ಮೆದುಳಿನ ಭಾಗವನ್ನು ಪತ್ತೆ ಮಾಡಲು ಸಾಧ್ಯವಿದೆ. ಆದರೆ, ತುರ್ತು ಸ್ಥಿತಿಯಲ್ಲಿ ಸಮಯಾವಕಾಶದ ಅಭಾವದ ಕಾರಣದಿಂದ , ಈ ವಿಧಾನವನ್ನು ಸಹ ಲಕ್ವಾದ ಚಿಕಿತ್ಸೆಯಲ್ಲಿ ಪ್ರಥಮ ಆದ್ಯತೆಯಲ್ಲಿ ಉಪಯೋಗಿಸುವುದು ಕಡಿಮೆ .
ಕಂಪ್ಯೂಟರೈಸ್ಡ್ ಟೊಮೋಗ್ರಫಿ ವಿದ್ ಆಂಜಿಯೋಗ್ರಫಿ :
ಈ ವಿಧಾನದಲ್ಲಿ ಕೈಯ ಒಂದು ರಕ್ತನಾಳಕ್ಕೆ ಕೃತಕ ಬಣ್ಣವನ್ನು (ಡೈಯನ್ನು ) ಸೂಜಿಯ ಮೂಲಕ ಚುಚ್ಚಿ , ಮೆದುಳಿನ ರಕ್ತನಾಳಗಳ ಬಿಂಬವನ್ನು ಪಡೆದು, ಅನ್ಯೂರಿಸಂ ಆಥವಾ ಅರ್ಟಿರಿಯೋವಿನಸ್ ಮಾಲ್ ಫಾರ್ಮೆàಷನ್ ಆಗಿದೆಯೇ ಎಂದು ಪತ್ತೆ ಮಾಡುತ್ತಾರೆ. ತಂತ್ರಜ್ಞಾನವು ಅಭಿವೃದ್ದಿ ಹೊಂದಿರುವ ಕಾರಣ ಈಗ ಸಿ.ಟಿ.ಸ್ಕ್ಯಾನ್ ಸಂದರ್ಭದಲ್ಲಿಯೇ ಸಿ.ಟಿ. ಆಂಜಿಯೋಗ್ರಫಿಯನ್ನೂ ಸಹ ಮಾಡಿ, ಮೆದುಳಿನ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿರುವಿಕೆಯನ್ನು ಪತ್ತೆ ಮಾಡುತ್ತಾರೆ.
ಸಿ,ಟಿ. ಹಾಗೂ MRI ಗಳ ಫಲಿತಾಂಶವನ್ನು ರೇಡಿಯಾಲಜಿಸ್ಟ್‌ಗಳು ವಿಶ್ಲೇಷಣೆ ಮಾಡುತ್ತಾರೆ.
ಕನ್ವೆನÒನಲ್ ಆಂಜಿಯೋಗ್ರಾಂ : ಆಂಜಿಯೋಗ್ರಾಮ್ ಎಂಬುದು ರಕ್ತನಾಳಗಳನ್ನು ನೋಡಲು ಮಾಡುವ ಮತ್ತೂಂದು ಪರೀಕ್ಷೆ . ಈ ವಿಧಾನದಲ್ಲಿ ಒಂದು ಉದ್ದನೆಯ ಸೂಕ್ಷ್ಮನಳಿಕೆಯನ್ನು ಕೈ ಅಥವಾ ಕಾಲಿನ ರಕ್ತನಾಳಗಳ ಮೂಲಕ ಮೆದುಳಿನ ರಕ್ತನಾಳಕ್ಕೆ ಹಾಯಿಸುತ್ತಾರೆ. ಡೈಯನ್ನು ಇಂಜೆಕ್ಟ್ ಮಾಡಿ, ಅದರ ಎಕ್ಸ್-ರೇಯನ್ನು ತೆಗೆದು, ಆ ಮೂಲಕ ಮೆದುಳಿನ ರಕ್ತ ಪರಿಚಲನೆಯ ವಿವರಗಳನ್ನು ಪಡೆಯುತ್ತಾರೆ. ರೋಗಿಯ ಸದ್ಯದ ಪರಿಸ್ಥಿತಿ ಹಾಗೂ ಅಸ್ಪತ್ರೆಯಲ್ಲಿ ಲಭ್ಯವಿರುವ ಸೇವೆಗಳ ಆಧಾರದ ಮೇಲೆ ಸಿ.ಟಿ.ಆಂಜಿಯೋಗ್ರಫಿ ಸೂಕ್ತವೋ ಅಥವಾ ಕನ್ವೆನÒನಲ್ ಆಂಜಿಯೋಗ್ರಫಿ ಸೂಕ್ತವೊ ಎಂಬುದನ್ನು ನಿರ್ಧರಿಸುತ್ತಾರೆ.
ಕ್ಯಾರೊಟಿಡ್ ಡಾಪ್ಲರ್ ಆಲ್ಟ್ರಾಸೌಂಡ್
ಈ ವಿಧಾನದಲ್ಲಿ, ಶಬ್ಧಗಳ ತರಂಗವನ್ನು ಉಪಯೋಗಿಸಿಕೊಂಡು, ಕ್ಯಾರೋಟಿಡ್ ರಕ್ತನಾಳದ (ಮೆದುಳಿಗೆ ರಕ್ತ ಸರಬರಾಜು ಮಾಡುವ ಕತ್ತಿನ ಮುಂಭಾಗದ ರಕ್ತನಾಳ) ರಕ್ತ ಪರಿಚಲನೆಯ ಸ್ಥಿತಿಯನ್ನು ತಿಳಿದುಕೊಳ್ಳುತ್ತಾರೆ. ಇದೊಂದು ದೇಹ ಪ್ರವೇಶರಹಿತ ವಿಧಾನ.
ಹೃದಯದ ಪರೀಕ್ಷೆಗಳು:
ಲಕ್ವಾ ರೋಗಿಗಳ ಹೃದಯದ ಆರೋಗ್ಯವನ್ನು ಪತ್ತೆ ಮಾಡಲು, ಹಾಗೂ ರಕ್ತ ಹೆಪ್ಪುಗಟ್ಟಲು ಕಾರಣವಾಗಿರುವ ಅಂಶವನ್ನು ಪತ್ತೆ ಮಾಡಲು, ಹೃದಯಕ್ಕೆ ಸಂಬಂಧಿಸಿದ ಕೆಲವು ಪರೀಕ್ಷೆಗಳನ್ನು ಮಾಡುತ್ತಾರೆ. ಉಇಎ ಅಥವಾ ಎಲೆಕ್ಟ್ರೋಕಾರ್ಡಿಯೋಗ್ರಾಂ ಮೂಲಕ ಹೃದಯದ ಬಡಿತದಲ್ಲಿರಬಹುದಾದ ಅಸಹಜತೆಗಳನ್ನು ಪತ್ತೆ ಮಾಡುತ್ತಾರೆ. ಎಂಬೋಲಿಕ್ ಸ್ಟ್ರೋಕ್ ಅಥವಾ ಗಡ್ಡೆಗಳಿಂದಾದ ಲಕ್ವಾಕ್ಕೆ ಕಾರಣವಾಗಿರುವ ರಕ್ತನಾಳಗಳ ಫೆೈಬ್ರಿಲ್ಲೇಷನ್ ಇದೆಯೇ ಎಂದು ಪತ್ತೆ ಮಾಡುತ್ತಾರೆ.
ಎಲೆಕ್ಟ್ರೋಕಾರ್ಡಿಯೋಗ್ರಾಂ ಆಥವಾ ಹೃದಯದ ಅಲ್ಟ್ರಾಸೌಂಡ್ ಪರೀಕ್ಷೆಯ ವೇಳೆ, ಹೃದಯ ಬಡಿತದ ಸಂದರ್ಭದಲ್ಲಿ ಅದರ ವಿವಿಧ ಭಾಗಗಳ ಚಲನೆಯನ್ನು ವಿಶ್ಲೇಷಣೆ ಮಾಡಲಾಗುವುದು. ಆ ಮೂಲಕ, ಹೃದಯದಲ್ಲಿಯೇ ರಕ್ತ ಹೆಪ್ಪುಗಟ್ಟಿದೆಯೇ ಎಂದು ಪತ್ತೆ ಮಾಡುತ್ತಾರೆ.
ರಕ್ತಪರೀಕ್ಷೆಗಳು
ಕೆಲವು ತೀವ್ರ ಸಂದರ್ಭಗಳಲ್ಲಿ, ರೋಗಿಯು ಲಕ್ವಾದ ಮಧ್ಯಾವಧಿಯಲ್ಲಿದ್ದಾಗ , ರೋಗಿಗೆ ರಕ್ತಹೀನತೆ ಇದೆಯೇ ಅಥವಾ ಮೂತ್ರಪಿಂಡಗಳ ಹಾಗೂ ಪಿತ್ತಜನಕಾಂಗದ ಕಾರ್ಯಕ್ಷಮತೆ ಸರಿಯಾಗಿದೆಯೇ ಎಂದು ಪತ್ತೆ ಮಾಡಲು, ಹಾಗೂ ರಕ್ತದಲ್ಲಿ ಎಲೆಕ್ಟ್ರೋಲೈಟ್‌ಗಳ ಅಸಹಜತೆ ಹಾಗೂ ರಕ್ತಹೆಪ್ಪುಗಟ್ಟುವ ಸಾಮರ್ಥ್ಯವನ್ನು ಪತ್ತೆ ಮಾಡಲು ರಕ್ತ ಪರೀಕ್ಷೆಗಳನ್ನು ಮಾಡುತ್ತಾರೆ.
ಲಕ್ವಾಕ್ಕೆ ಚಿಕಿತ್ಸೆ ಏನು?
ಟಿಶ್ಯೂ ಪ್ಲಾಸ್ಮಿನೋಜೆನ್ ಆಕ್ಟಿವೇಟರ್ (ಖಕಅ)
ಲಕ್ವಕ್ಕೆ ಕಾರಣವಾಗಿರುವ ರಕ್ತಹೆಪ್ಪುಗಟ್ಟುವಿಕೆಯನ್ನು ನಿವಾರಿಸಲು ಆಲ್‌ಟೆಪ್ಲಾಸ್ (ಖಕಅ) ಅನ್ನು ಉಪಯೋಗಿಸುವ ಆವಕಾಶವಿದೆ . ಆದರೆ ಔಷಧಿಯನ್ನು ಉಪಯೋಗಿಸಬಹುದಾದ ಅವಕಾಶ ಬಹಳ ಕಡಿಮೆ. ಈ ಔಷಧಿಯನ್ನು ಆರಂಭದಲ್ಲಿಯೇ ಕೊಟ್ಟರೆ, ಮೆದುಳಲ್ಲಿ ರಕ್ತಸ್ರಾವವಾಗಿ ಆಗುವ ತೊಂದರೆಯನ್ನು ಬಹುಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು.
ಪ್ರಸುತ್ತ ತಜ್ಞರ ಸೂಚನಾ ಶಿಫಾರಸಿನ ಪ್ರಕಾರ, ಲಕ್ವಾ ಆಘಾತವಾದ 4 ಗಂಟೆಯ ನಂತರ ಮಾತ್ರವೇ ಖಕಅನ್ನು ನೀಡಬಹುದಾಗಿದೆ. ಖಕಅ ಯು ಬಹಳಷ್ಟು ಜನರಲ್ಲಿ ಲಕ್ವಾ ಲಕ್ಷಣಗಳನ್ನು ಕಡಿಮೆ ಮಾಡಿದರೂ ಸಹ, ಸುಮಾರು 6 % ಜನರಲ್ಲಿ ಇದು ರಕ್ತ ಸ್ರಾವವನ್ನು ಇನ್ನಷ್ಟು ತೀವ್ರಗೊಳಿಸಿ, ರೋಗಿಯ ಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಬಹುದು.
ಹೆಪಾರಿನ್ ಹಾಗೂ ಆಸ್ಪಿರಿನ್ :
ಆಸ್ಪಿರಿನ್ ಮುಂತಾದ ಆಂಟಿಕೊಆಗ್ಯುಲೇಷನ್ -ರಕ್ತದ ಹೆಪ್ಪುಗಟ್ಟುವಿಕೆ ನಿವಾರಕ (: ಉದಾ : ಹೆಪಾರಿನ್) ಔಷಧಿಗಳನ್ನು ರಕ್ತವನ್ನು ತೆಳುಗೊಳಿಸಲು, ಲಕ್ವಾದ ಚಿಕಿತ್ಸೆಯ ಸಂದರ್ಭದಲ್ಲಿ ಉಪಯೋಗಿಸುತ್ತಾರೆ. ರೋಗಿಯ ಸ್ಥಿತಿಯನ್ನು ಉತ್ತಮಗೊಳಿಸಬಹುದೆನ್ನು ವ ಭರವಸೆಯಲ್ಲಿ ಈ ಔಷಧಿಯನ್ನು ಉಪಯೋಗಿಸುತ್ತಾರೆ.
ಆದರೆ, ಸೆರೆಬ್ರಲ್ ಹೆಮರೇಜ್ ಆದಾಗ, ಈ ಔಷಧಿಯನ್ನು ನೀಡಲಾಗುವುದಿಲ್ಲ. ಯಾಕೆಂದರೆ, ಸೆರೆಬ್ರಲ್ ಹೆಮರೇಜ್ ಆದ ರೋಗಿಗಳನ್ನು ತುರ್ತುನಿಗಾ ಘಟಕದಲ್ಲಿ ಇರಿಸಿ, ನರತಜ್ಞರ ಸಲಹೆ ಮಾರ್ಗದರ್ಶದಲ್ಲಿ ಹೈಪರ್ಟೆನ್ಸಿವ್ ನಿರೋಧಕ ಹಾಗೂ ಎಡೆಮಾ ನಿರೋಧಕ ಔಷಧಿಗಳ ಚಿಕಿತ್ಸೆ ನೀಡುತ್ತಾರೆ