CLICK HERE ವಿಕಲಚೇತನ App

ವಿಕಲಚೇತನರ ವಿವಾಹ ಪ್ರೋತ್ಸಾಹ ಧನ ಯೋಜನೆ ಪ್ರಕ್ರಿಯೆ


ಈ ಸೇವೆ ಪಡೆಯಲು ಅರ್ಹತೆಗಳು
1.ವಿವಾಹವಾಗುವ ಹುಡುಗಿಯ ವಯಸ್ಸು18 ರ ಮೇಲ್ಪಟ್ಟಿರಬೇಕು ಮತ್ತು ಹುಡುಗನ ವಯಸ್ಸು 21 ಮೇಲ್ಪಟ್ಟವರಾಗಿರಬೇಕು.
2.ವಿವಾಹವಾಗುವ ವ್ಯಕ್ತಿ ಎರಡನೇ ಬಾರಿಗೆ ವಿವಾಹವಾಗಲಿದ್ದರೆ, ಈ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುವುದಿಲ್ಲ.
3.ಕನಿಷ್ಠ 40% ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ವಿಕಲಚೇತನತೆ ಹೊಂದಿರಬೇಕು

ದಾಖಲೆಗಳ ವಿವರಗಳು
1. ವಿವಾಹ ನೊಂದಣಿ ಪ್ರಮಾಣ ಪತ್ರ
2. ಕರ್ನಾಟದಲ್ಲಿ 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ವಾಸಿಸುತ್ತಿರುವುದಕ್ಕೆ ಸ್ಥಳದ ದೃಢೀಕರಣ ಪತ್ರ
3. ಅಂಗವಿಕಲ ವ್ಯಕ್ತಿಗಳ ಘೋಷಣೆ ಮತ್ತು ಅದರ ಪ್ರತಿ
4. ಆಧಾರ್ ಕಾರ್ಡ್
5. ವಿಕಲಚೇತನರ ಗುರುತಿನ ಚೀಟಿ

ಪ್ರಕ್ರಿಯೆ

1. ಅರ್ಜಿದಾರರು ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಲಾಗ್ ಇನ್ ಆಗುವುದು
2. ನ೦ತರ, ಅರ್ಜಿದಾರರು ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ನಮೂದಿಸಿದಾಗ ಓಟಿಪಿ ಸಂಖ್ಯೆಯು ಅವರ ಮೊಬೈಲಿಗೆ ಸಂದೇಶ ಬರುವುದು, ಸದರಿ ಓಟಿಪಿ ಸಂಖ್ಯೆಯನ್ನು ನಮೂದಿಸಿದಾಗ ಅರ್ಜಿದಾರರು ಬಯಸಿದ ಸೇವೆಯ ಅರ್ಜಿಯ ಪುಟ ಅನಾವರಣಗೊಳ್ಳುವುದು
3. ಮನವಿದಾರರು ಸದರಿ ಅರ್ಜಿಯಲ್ಲಿ ಕೋರಿರುವ ಎಲ್ಲಾ ಮಾಹಿತಿಗಳನ್ನು ಸಂಬಂಧಿಸಿದ ಕಂಡಿಕೆಯಲ್ಲಿ ತುಂಬುವುದು ನಂತರ ಉಳಿಸು ಎಂಬುದನ್ನು ಕ್ಲಿಕ್ ಮಾಡುವುದು
4. ಅರ್ಜಿ ಸಲ್ಲಿಸಿದ ನಂತರ ಒಂದು ಸ್ವೀಕೃತಿ ಸಂಖ್ಯೆಯು ಸಿಗುತ್ತದೆ
5. ಅರ್ಜಿಯು ವಿಷಯನಿರ್ವಾಹಕರಿಗೆ ಹೋಗುತ್ತದೆ. ನಂತರ ವಿಷಯ ನಿರ್ವಾಹಕರು ದಾಖಲೆಗಳೊಂದಿಗೆ ಅರ್ಜಿದಾರರ ಎಲ್ಲಾ ವಿವರಗಳನ್ನು ಪರಿಶೀಲಿಸುವರು
6. ಕೇಸ್ ವರ್ಕರ್ ದಾಖಲೆಗಳೊಂದಿಗೆ ಅರ್ಜಿದಾರರ ಎಲ್ಲಾ ವಿವರಗಳನ್ನು ಪರಿಶೀಲಿಸಲು
7. ವಿಷಯ ನಿರ್ವಾಹಕರು ಅರ್ಜಿಗಳನ್ನು ಪರಿಶೀಲಿಸಿ, ಅಭಿಪ್ರಾಯದೊಂದಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸುತ್ತಾರೆ
8. DDWO ಎಲ್ಲಾ ವಿವರಗಳನ್ನು ನಿಯಮಾನುಸಾರ ಪರಿಶೀಲಿಸಿ, ಸರಿಯಾಗಿದ್ದರೆ, ಒಪ್ಪಿಗೆ ಸೂಚಿಸುತ್ತಾರೆ
9. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ, ಮಂಜೂರಾತಿ ನೀಡಲಾಗುವುದು
10. ಖಜಾನೆಯಿಂದ ಬ್ಯಾಂಕಿನ ವ್ಯವಸ್ಥಾಪಕರ ಹೆಸರಲ್ಲಿ ಚೆಕ್ ನ್ನು ಪಡೆಯಲಾಗುವುದು
11. ದಂಪತಿಗಳ ಹೆಸರಿಲ್ಲಿರುವ ನಿಶ್ಚಿತ ಠೇವಣಿ ಪತ್ರವನ್ನು ಬ್ಯಾಂಕ್ ನ ವ್ಯವಸ್ಥಾಪಕರು ನೀಡುವರು